ಶನಿವಾರ, ಸೆಪ್ಟೆಂಬರ್ 18, 2021
28 °C

ಜಲೇಬಿ ಬೇಬಿ ಎಂದು ತನ್ವಿ ಶಾ ಜತೆ ಡ್ಯಾನ್ಸ್ ಮಾಡಿದ ಹಂಸಿಕಾ ಮೋಟ್ವಾನಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Hansika Motwani Instagram Post

ಬೆಂಗಳೂರು: ನಟಿ ಹಂಸಿಕಾ ಮೋಟ್ವಾನಿ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವ ನಟಿ. ಸದ್ಯ ಅವರು ಮಾಲ್ಡೀವ್ಸ್‌ನಲ್ಲಿ ಪ್ರವಾಸದಲ್ಲಿದ್ದು, ಅಲ್ಲಿಂದ ಬೀಚ್‌ನಲ್ಲಿರುವ ವಿವಿಧ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಅಲ್ಲದೆ, ಸಹೋದರಿ ತನ್ವಿ ಶಾ ಜತೆಗೆ ಇನ್‌ಸ್ಟಾಗ್ರಾಂ ರೀಲ್ಸ್ ಒಂದನ್ನು ಮಾಡಿರುವ ನಟಿ, ಅದರಲ್ಲಿ ಮಾಲ್ಡೀವ್ಸ್ ಬೀಚ್‌ನಲ್ಲಿ ಕಳೆದಿರುವ ಸುಂದರ ಕ್ಷಣಗಳನ್ನು ಹಂಸಿಕಾ ನೆನಪಿಸಿಕೊಂಡಿದ್ದಾರೆ.

ಮಾಲ್ಡೀವ್ಸ್‌ನ ಸನ್ ಸಿಯಮ್ ಇರುವೆಲಿ ರೆಸಾರ್ಟ್‌ನಲ್ಲಿ ಹಂಸಿಕಾ ರೀಲ್ಸ್ ಚಿತ್ರೀಕರಣ ಮಾಡಿದ್ದಾರೆ.

ತನ್ವಿ ಶಾ ಜತೆಗೆ ಜಲೇಬಿ ಬೇಬಿ ಎಂದು ಕುಣಿದಿರುವ ವಿಡಿಯೊ ಈಗ ವೈರಲ್ ಆಗಿದೆ.

ಹಂಸಿಕಾ ಇನ್‌ಸ್ಟಾಗ್ರಾಂ ರೀಲ್ಸ್ ಅನ್ನು ಮೂರು ಲಕ್ಷಕ್ಕೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್ ತೆರವಿನ ಬಳಿಕ ಸೆಲೆಬ್ರಿಟಿಗಳು, ಬಾಲಿವುಡ್‌ ಮಂದಿ ಮಾಲ್ಡೀವ್ಸ್‌ಗೆ ಮತ್ತೆ ಪ್ರವಾಸ ಹೋಗಿ ಬರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು