ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರಂಜನೆ | ಸ್ವಂತ ಚಾನೆಲ್‌ ಆರಂಭಿಸಿದ ಹನ್ಸಿಕಾ

Last Updated 9 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಈಗ ಯೂಟ್ಯೂಬ್‌ನಲ್ಲಿ ಸ್ವಂತ ಚಾನೆಲ್‌ ಆರಂಭಿಸಿದ್ದಾರೆ.

‘ನಾನುಕೊನೆಗೂ ಯೂಟ್ಯೂಬ್‌ಚಾನೆಲ್‌ ಆರಂಭಿಸಿದ್ದೇನೆ. ನಿಮ್ಮ ಜತೆಗೆ ಈ ಸುದ್ದಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಹಾಗೆಯೇ ಅಂಜಿಕೆಯೂ ಇದೆ. ನೀವು ನನ್ನ ಜತೆ ಕ್ರೇಜಿ ಪಯಣಕ್ಕೆ ಮತ್ತು ನನ್ನ ಬದುಕಿನ ಬಗ್ಗೆ ತಿಳಿಯಲುತಯಾರಾಗಿ. ನೀವು ಈ ಚಾನೆಲ್‌ ಇಷ್ಟಪಡುತ್ತೀರಿ ಮತ್ತು ಚಂದಾದಾರರಾಗುವಿರೆಂದು ಭಾವಿಸುವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹನ್ಸಿಕಾ ಯೂಟ್ಯೂಬ್‌ (youtube.com/watch?v=Ucz9A8YTa1w) ಚಾನೆಲ್‌ ಆರಂಭಿಸಿದ ಒಂದೇ ದಿನದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಜನರು ಚಂದಾದಾರರಾಗಿದ್ದಾರೆ.

ಬಾಲನಟಿಯಾಗಿ ಹಿಂದಿ ಚಿತ್ರರಂಗದಿಂದ ಬಣ್ಣದಲೋಕಕ್ಕೆ ಕಾಲಿಟ್ಟ ಹನ್ಸಿಕಾ, ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ. ಕನ್ನಡದಲ್ಲೂ ಅವರು ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಬಿಂದಾಸ್‌’ ಚಿತ್ರದಲ್ಲೂ ಬಿಂದಾಸ್‌ ಆಗಿಯೇ ನಟಿಸಿದ್ದರು.

ಸದ್ಯಕ್ಕೆ ಅವರು ಯು.ಆರ್‌. ಜಮೀಲ್‌ ನಿರ್ದೇಶನದ ಮಹಿಳಾ ಕೇಂದ್ರಿತ ತಮಿಳಿನ ‘ಮಹಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ನಟನೆಯ 50ನೇ ಚಿತ್ರ ಎನ್ನುವುದು ವಿಶೇಷ. ಇದರಲ್ಲಿ ಅವರದು ಸಾಧು ವೇಷಧಾರಿಣಿ ಪಾತ್ರವಂತೆ. ಭಂಗಿ ಸೇದಿ ಹೊಗೆ ಬಿಡುತ್ತಿರುವ ಇದರ ಪೋಸ್ಟರ್‌ ಚಿತ್ರರಸಿಕರ ಗಮನ ಸೆಳೆಯುತ್ತಿದೆ.

ಹನ್ಸಿಕಾ ಮೋಹಕ ಚೆಲುವು ಮತ್ತು ನಟನೆಯಿಂದಷ್ಟೇ ಅಭಿಮಾನಿಗಳ ಮನಗೆದ್ದಿಲ್ಲ. ಫ್ಯಾಷನ್‌ ಲೋಕದಲ್ಲೂ ಜನಪ್ರಿಯತೆ ಪಡೆದ ಹೆಗ್ಗಳಿಕೆ ಆಕೆಯದು. ಅವರ ಡ್ರೆಸ್‌ಸೆನ್ಸ್‌, ಮೇಕಪ್‌, ಕೇಶ ವಿನ್ಯಾಸ, ಟ್ರಾವೆಲ್‌ ಲುಕ್‌ ಅನ್ನು ಅನುಕರಿಸುವ ಲಕ್ಷಾಂತರ ಯುವತಿಯರಿದ್ದಾರೆ.ಸಿನಿಮಾ, ಫ್ಯಾಷನ್‌, ವೈಯಕ್ತಿಕ ಬದುಕು, ಪ್ರವಾಸ, ಅಭಿರುಚಿ, ಹವ್ಯಾಸ ಕುರಿತು ಈ ಚಾನೆಲ್‌ನಲ್ಲಿ ಹಂಚಿಕೊಳ್ಳಲಿದ್ದಾರೆ. ಟ್ವಿಟರ್‌ನಲ್ಲಿ ಅವರಿಗೆ 4.7 ದಶಲಕ್ಷ, ಇನ್‌ಸ್ಟಾಗ್ರಾಮ್‌ನಲ್ಲಿ 3.4 ಹಾಗೂ ಫೇಸ್‌ಬುಕ್‌ನಲ್ಲಿ 6.3 ದಶಲಕ್ಷ ಫಾಲೋವರ್‌ಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT