ಬುಧವಾರ, ಜುಲೈ 28, 2021
20 °C

ದಳಪತಿ ವಿಜಯ್‌ ಜನ್ಮದಿನಾಚರಣೆ: 'ಬೀಸ್ಟ್' ಸಿನಿಮಾ ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೊರೊನಾ’ ಕಾರಣದಿಂದಾಗಿ ತಮಿಳು ನಟ ದಳಪತಿ ವಿಜಯ್‌ ಅವರ ಜನ್ಮದಿನಾಚರಣೆ ಈ ವರ್ಷವೂ ಸರಳವಾಗಿ ನಡೆದಿದೆ. 'ಬೀಸ್ಟ್' ಚಿತ್ರತಂಡ ವಿಜಯ್‌ ಅವರ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ವಿಶೇಷ ಉಡುಗೊರೆ ನೀಡಿದೆ.

ಪ್ರತಿ ವರ್ಷ ಅಭಿಮಾನಿಗಳು ವಿಜಯ್‌ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರು. ವಿಜಯ್‌ ಅಭಿನಯದ ಚಿತ್ರಗಳನ್ನು ಮರು ಬಿಡುಗಡೆ ಮಾಡಿ ಸಂಭ್ರಮಿಸುತ್ತಿದ್ದರು. ರಕ್ತದಾನ, ಅನ್ನಸಂತರ್ಪಣೆ, ಪುಸ್ತಕ ವಿತರಣೆಯಂತಹ ಸಾಮಾಜಿಕ ಕಾರ್ಯಗಳ ಮೂಲಕ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು.

ಕೊರೊನಾ ಕಾರಣ ಸ್ವತಃ ವಿಜಯ್‌ ಅವರೇ ‘ಈ ಬಾರಿ ಸಂಭ್ರಮಾಚರಣೆ ಬೇಡ‘ ಎಂದು ಮನವಿ ಮಾಡಿದ್ದ ಕಾರಣ, ಸರಳವಾಗಿ ಹುಟ್ಟು ಹಬ್ಬ ಆಚರಿಸಿದ್ದಾರೆ ಅಭಿಮಾನಿಗಳು. ಕಳೆದ ವರ್ಷ ಕೂಡ ವಿಜಯ್‌ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 

ಬೀಸ್ಟ್‌ ಸಿನಿಮಾದ ಪೋಸ್ಟರ್‌ ನೋಡಿದರೆ ಇದೊಂದು ಮಾಸ್‌ ಸಿನಿಮಾ ಎಂಬುದು ಗೊತ್ತಾಗುತ್ತದೆ.  ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದೀಲಿಪ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ವಿಜಯ್‌ ಜೊತೆಯಾಗಿ ನಟಿಸುತ್ತಿದ್ದಾರೆ.

47ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್‌ಗೆ ಅಭಿಮಾನಿಗಳು ಮತ್ತು ಸಿನಿಮಾರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು