ಭಾನುವಾರ, ಜುಲೈ 25, 2021
22 °C

ಹೊಸ ಸಿನಿಮಾಕ್ಕೆ ದಳಪತಿ ವಿಜಯ್‌ ಸಂಭಾವನೆ ಕಡಿತ

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ನಲ್ಲಿ ನಟ ದಳಪತಿ ವಿಜಯ್ ಯಶಸ್ಸಿನ ಬೆನ್ನೇರಿ ಹೊರಟಿದ್ದಾರೆ. ಅವರು ನಟಿಸಿದ ಸಿನಿಮಾಗಳು ಬಾಕ್ಸ್ಆಫೀಸ್‌ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವುದೇ ಇದಕ್ಕೆ ನಿದರ್ಶನ. ‘ಮರ್ಸೆಲ್’, ‘ಬಿಗಿಲ್’ ಚಿತ್ರಗಳ ಗೆಲುವಿನ ಬಳಿಕ ಅವರ ಸಂಭಾವನೆಯ ಗ್ರಾಫ್ ಕೂಡ ಏರುಗತಿಯಲ್ಲಿರುವುದು ಗುಟ್ಟೇನಲ್ಲ.

ಅಂದಹಾಗೆ ಅವರು ಸಿನಿಮಾವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಎಂಬುದು ಅಭಿಮಾನಿಗಳ ಕುತೂಹಲದ ಪ್ರಶ್ನೆ. ಕಳೆದ ವರ್ಷ ತೆರೆಕಂಡ ‘ಬಿಗಿಲ್’ ಗಲ್ಲಾಪೆಟ್ಟಿಗೆಯಲ್ಲಿ ₹ 300 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಹಾಗಾಗಿ, ಅವರು ಸಿನಿಮಾವೊಂದಕ್ಕೆ ₹ 70 ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬುದು ಕಾಲಿವುಡ್‌ ಪಡಸಾಲೆಯಿಂದ ಕೇಳಿಬರುವ ಮಾತು.

ವಿಜಯ್‌ ನಟನೆಯ ‘ಮಾಸ್ಟರ್‌’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಲೋಕೇಶ್‌ ಕನಕರಾಜ್‌ ನಿರ್ದೇಶಿಸಿರುವ ಇದರಲ್ಲಿ ಅವರದು ಪ್ರಾಧ್ಯಾಪಕನ ಪಾತ್ರ. ಮಾಳವಿಕಾ ಮೋಹನನ್‌ ಇದರ ನಾಯಕಿ. ಒಟಿಟಿ ಮೂಲಕ ಈ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲ. ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಈಗಾಗಲೇ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

‘ಮಾಸ್ಟರ್‌’ ಬಳಿಕ ವಿಜಯ್‌ ನಟನೆಯ 65ನೇ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಎ.ಆರ್‌. ಮುರುಗದಾಸ್‌. ‘ತುಪಾಕಿ’, ‘ಕಥಿ’ ಮತ್ತು ‘ಸರ್ಕಾರ್‌’ ಸಿನಿಮಾಗಳ ಬಳಿಕ ಮತ್ತೆ ಈ ಜೋಡಿ ನಾಲ್ಕನೇ ಬಾರಿಗೆ ಒಂದಾಗುತ್ತಿದೆ.

ಚಿತ್ರೋದ್ಯಮಕ್ಕೆ ಕೋವಿಡ್‌ –19 ಭಾರೀ ಪೆಟ್ಟು ನೀಡಿದೆ. ಹಾಗಾಗಿ, ಸಿನಿಮಾ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು, ನಟ, ನಟಿಯರು ಸಂಭಾವನೆಯ ಕಡಿತಕ್ಕೆ ಮುಂದಾಗಿದ್ದಾರೆ. ವಿಜಯ್‌ ಕೂಡ ಹೊಸ ಚಿತ್ರಕ್ಕೆ ₹ 20 ಕೋಟಿ ಸಂಭಾವನೆಯನ್ನು ಕಡಿತಗೊಳಿಸಿದ್ದಾರಂತೆ. ನಿರ್ಮಾಪಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಈ ನಿರ್ಧಾರ ತಳೆದಿದ್ದಾರೆ. ನಿರ್ದೇಶಕ ಮುರುಗದಾಸ್‌ ಕೂಡ ತಮಗೆ ನೀಡುವ ಸಂಭಾವನೆಯಲ್ಲಿ ಶೇಕಡ 30ರಷ್ಟನ್ನು ಕಡಿತಗೊಳಿಸಿದ್ದಾರೆ ಎನ್ನುತ್ತವೆ ಕಾಲಿವುಡ್‌ ಮೂಲಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು