ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್‌ ಸಿಂಗ್‌ ರಜಪೂತ್‌‌ ಒಳ್ಳೆಯ ವ್ಯಕ್ತಿ: ಹೊಗಳಿದ ಬಾಂಬೆ ಹೈಕೋರ್ಟ್

Last Updated 7 ಜನವರಿ 2021, 13:47 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ, ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರನ್ನು ಹೊಗಳಿರುವ ಬಾಂಬೆ ಹೈಕೋರ್ಟ್‌, ’ಅವರ ಮುಖಚಹರೆಯೇ ಅವರು ಪ್ರಾಮಾಣಿಕ ಹಾಗೂ ಉತ್ತಮ ವ್ಯಕ್ತಿಯೆಂಬುದನ್ನು ತಿಳಿಸುತ್ತದೆ‘ ಎಂದು ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದೆ.

ಸುಶಾಂತ್‌ ನಟನೆಯ ’ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿ ಅವರ ನಟನೆಯನ್ನು ಹೊಗಳಿರುವ ನ್ಯಾಯಾಲಯವು, ’ಪ್ರಕರಣ ಏನೇ ಆಗಿರಲಿ, ಸುಶಾಂತ್‌ ಅವರ ಮುಖ ನೋಡುವಾಗ ಅವರು ಮುಗ್ಧ, ಸಾಧು ಹಾಗೂ ಒಳ್ಳೆ ಮನುಷ್ಯ ಎಂಬುದನ್ನು ಹೇಳುತ್ತದೆ‘ ಎಂದು ನ್ಯಾಯಾಧೀಶರಾದ ಶಿಂಧೆ ಹೇಳಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ಸಹೋದರಿಯರಾದ ಪ್ರಿಯಾಂಕಾ ಸಿಂಗ್‌, ಮೀತು ಸಿಂಗ್‌ ಅವರು ತಮ್ಮ ವಿರುದ್ಧ ಸುಶಾಂತ್‌ ಗೆಳತಿ, ನಟಿ ರಿಯಾ ಚಕ್ರವರ್ತಿ ಹಾಕಿರುವ ಎಫ್‌ಐಆರ್‌ ರದ್ದುಗೊಳಿಸಲು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರಾದ ಎಸ್‌.ಎಸ್‌.ಶಿಂಧೆ, ಎಂ.ಎಸ್‌. ಕಾರ್ಣಿಕ್‌ ಅವರನ್ನೊಳಗೊಂಡ ಪೀಠವುಗುರುವಾರ ವಿಚಾರಣೆ ನಡೆಸಿತು.

’ಸುಶಾಂತ್‌ ಸಿಂಗ್‌ ಅವರ ವೈದ್ಯಕೀಯ ದಾಖಲೆಗಳು ನಕಲಿ ಹಾಗೂ ಬದಲಾಯಿಸಲಾಗಿದೆ‘ ಎಂದು ರಿಯಾ ಚಕ್ರವರ್ತಿ, ಸುಶಾಂತ್‌ ಸಹೋದರಿಯರು ಹಾಗೂ ದೆಹಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯ ವೈದ್ಯ ತರುಣ್‌ ಕುಮಾರ್‌ ವಿರುದ್ಧ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

34 ವರ್ಷದ ಸುಶಾಂತ್‌ ಸಿಂಗ್‌ ತಮ್ಮ ಬಾಂದ್ರಾದ ಮನೆಯಲ್ಲಿ ಕಳೆದ ಜೂನ್‌ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT