ಶನಿವಾರ, ಮಾರ್ಚ್ 25, 2023
22 °C

‘ಹೀಗೇಕೆ ನೀ ದೂರ ಹೋಗುವೆ’ ಶೀಘ್ರ ಒಟಿಟಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ, ನಿರ್ದೇಶಕ ಸಂದೀಪ್ ಮಲಾನಿ ನಟಿಸಿರುವ ನೂರನೇ ಚಿತ್ರ ‘ಹೀಗೇಕೆ ನೀ ದೂರ ಹೋಗುವೆ’. ಈ ಚಿತ್ರ ನಿರ್ಮಾಣ ಅಂತಿಮ ಹಂತದಲ್ಲಿದೆ. ಚಿತ್ರ ಶೀಘ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.  

ಚಿತ್ರದ ಮಾಹಿತಿ ನೀಡಿದ ಸಂದೀಪ್‌, ‘ಇದು ನನಗಿಷ್ಟವಾದ ಜನಪ್ರಿಯ ಗೀತೆಯೊಂದರ ಸಾಲು. ಚಿತ್ರದ ಕಥೆ ಹಾಗೂ ಶೀರ್ಷಿಕೆಗೂ ಸಂಬಂಧವಿದೆ. ನಾನು ನಟಿಸಲೂ ಬೇಕಾದ ಕಾರಣ, ನನ್ನ ಮಗ ಸಿಲ್ವರ್ ಮಲಾನಿ ಹಾಗೂ ತಮ್ಮ ಸಂತೋಷ್ ಇಬ್ಬರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜೇಶ್ ಚೌಧರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ನನ್ನೊಂದಿಗೆ ಎಸ್ತರ್ ನರೋನ್ಹಾ, ನಿಹಾಲ್ ತಾವ್ರೋ ಹಾಗೂ ಅಶ್ವಿನ್ ಡಿ ಕೋಸ್ಟಾ, ರಾಜೀವ್ ಪಿಳ್ಳೈ, ಸೀಮಾ‌ ಬುತೆಲ್ಲೋ, ಉದಯ ಸೂರ್ಯ ಮತ್ತು ನಿರ್ಮಾಪಕರ ಪುತ್ರಿಯರಾದ ಅಶ್ಮಿತಾ ಚೌಧರಿ, ಅಮೀಶಾ ಚೌಧರಿ ಮುಂತಾದವರು ಅಭಿನಯಿಸಿದ್ದಾರೆ’ ಎಂದರು.

‘ಇದು ತಂದೆ - ಮಗನ ಅವಿನಾಭಾವ ಸಂಬಂಧದ ಕಥೆ. ಕನ್ನಡದಲ್ಲಷ್ಟೇ ಅಲ್ಲದೇ ಹಿಂದಿಯಲ್ಲಿ ‘ದಿ ವಿಸಿಟರ್ಸ್’ ಎಂಬ ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಕೊಂಕಣಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರಕ್ಕೆ ಡಬ್‌ ಆಗಲಿದೆ’ ಎಂದರು ಮಲಾನಿ.

ಉದಯ್ ಕಿರಣ್, ಅಶ್ವಿನ್ ಡಿ ಕೋಸ್ಟಾ, ಸೀಮಾ ಬುತೆಲ್ಲೋ, ಹರೇರಾಮ್ ಠಾಕೂರ್, ಅಶ್ಮಿತಾ, ಅಮಿಶಾ, ರಾಜೀವ್ ಪಿಳ್ಳೈ ಚಿತ್ರದ  ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.