ಮಂಗಳವಾರ, ಜನವರಿ 25, 2022
25 °C

'ಹೆಲೆನ್‌' ಹಿಂದಿ ರೀಮೇಕ್‌ 'ಮಿಲಿ': ಚಿತ್ರೀಕರಣ ಪೂರ್ಣಗೊಳಿಸಿದ ಜಾಹ್ನವಿ

ಪಿಟಿಐ Updated:

ಅಕ್ಷರ ಗಾತ್ರ : | |

Instagram/Jahnvi Kapoor

ಬೆಂಗಳೂರು: ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಅವರು 'ಮಿಲಿ' ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಜಾಹ್ನವಿ ತಂದೆ ಬೋನಿ ಕಪೂರ್‌ ನಿರ್ಮಾಪಕರಾಗಿರುವ ಈ ಸಿನಿಮಾಗೆ ಮಲಯಾಳಂ ನಿರ್ದೇಶಕ ಮಧುಕುಟ್ಟಿ ಕ್ಸೇವಿಯರ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಮಿಲಿ ಹಿಂದಿ ಚಿತ್ರವು ಮಲಯಾಳಂನ ಅನ್ನಾ ಬೆನ್‌ ನಟನೆಯ 'ಹೆಲೆನ್‌' ಸಿನಿಮಾದ ರೀಮೇಕ್‌ ಆಗಿದೆ. ಸಾವಿನ ದವಡೆಯಿಂದ ಪಾರಾಗುವ ರೋಚಕ ಕಥಾಹಂದರವನ್ನು ಈ ಚಿತ್ರ ಹೊಂದಿದ್ದು, ವಿನೀತ್‌ ಶ್ರೀನಿವಾಸನ್‌ ನಿರ್ಮಿಸಿದ್ದರು. 2019ರಲ್ಲಿ ತೆರೆ ಕಂಡ ಈ ಸಿನಿಮಾ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಅನ್ನಾ ಬೆನ್‌ ರಾಜ್ಯ ಪ್ರಶಸ್ತಿಗೆ ಪಾತ್ರರಾದರು.

ತಂದೆ ಬೋನಿ ಕಪೂರ್‌ ಚಿತ್ರದಲ್ಲಿ ಮೊದಲ ಬಾರಿಗೆ ಕೆಲಸ ಮಾಡಿದ ಅನುಭವವನ್ನು 24 ವರ್ಷದ ನಟಿ ಜಾಹ್ನವಿ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಹಂಚಿಕೊಂಡಿದ್ದಾರೆ.

'ಮಿಲಿ' ಚಿತ್ರದ ಅಭಿನಯ ಪೂರ್ಣಗೊಂಡಿದೆ. ಇದು ಅಪ್ಪನ ಜೊತೆಗಿನ ನನ್ನ ಮೊದಲ ಸಿನಿಮಾ. ಜೀವನದುದ್ದಕ್ಕೂ ತಂದೆಯೊಬ್ಬ ನಿರ್ಮಾಪಕ ಎಂಬುದನ್ನಷ್ಟೇ ಕೇಳಿಕೊಂಡು ಬಂದಿದೆ. ಆದರೆ ನಿನ್ನ ಜೊತೆ ಕೆಲಸ ಮಾಡಿದ ಬಳಿಕ, ನನಗೆ ಕೂಲ್‌ ಎನಿಸಿತು. 'ಆಯ್ಕೆ ಮಾಡುವ ಪ್ರತಿ ಸಿನಿಮಾದ ಹೃದಯ ಮತ್ತು ಆತ್ಮ ನೀನಾಗಬೇಕು' ಎಂದು ಪ್ರತಿಯೊಬ್ಬರು ಹೇಳುವುದರ ಅರ್ಥವೇನು ಎಂಬುದು ನನಗೆ ಅಂತಿಮವಾಗಿ ತಿಳಿಯಿತು' ಎಂದು ಜಾಹ್ನವಿ ಬರೆದಿದ್ದಾರೆ.

'ಮಿಲಿ' ವಿಶೇಷವೆನಿಸಲು ತಂದೆಯ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ ಎಂಬುದು ಮಾತ್ರವಲ್ಲ. ಇಡೀ ಚಿತ್ರತಂಡದಿಂದ ಪಡೆದ ಅನುಭವಕ್ಕೂ ಜಾಹ್ನವಿ ಧನ್ಯವಾದ ಸಲ್ಲಿಸಿದ್ದಾರೆ. ನಿರ್ದೇಶಕರಿಗೆ ಮತ್ತು ಸಹ-ನಟ, ಚಿತ್ರ ಸಾಹಿತಿ ನೋಬಲ್‌ ಬಾಬು ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

ಚಿತ್ರದಲ್ಲಿ ತಂದೆಗೆ ಹೆಮ್ಮೆ ತರುವಂತೆ ನಟಿಸಿದ್ದೇನೆ ಎಂಬ ನಂಬಿಕೆ ತಮಗಿದೆ ಎಂದು ಜಾಹ್ನವಿ ಹೇಳಿದ್ದಾರೆ.

'ಮಿಲಿ' ಚಿತ್ರದಲ್ಲಿ ನಟ ಮನೋಜ್‌ ಪಹವಾ ಮತ್ತು ಸನ್ನಿ ಕೌಶಾಲ್‌ ಅಭಿನಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು