ಶುಕ್ರವಾರ, ಮೇ 27, 2022
22 °C

ಬಿಗ್ ಬಾಸ್ 15: ವಿಷ ಕುಡಿಯಲು ಮುಂದಾಗಿದ್ದ ಅಭಿಜಿತ್ ಬಿಚುಕಲೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಿಗ್ ಬಾಸ್ ಸೀಸನ್ 15ರ ಮನೆಯಲ್ಲಿ ಅಭಿಜಿತ್ ಬಿಚುಕಲೆ ಮತ್ತು ದಿವೋಲಿನಾ ಭಟ್ಟಾಚಾರ್ಯ ನಡುವಿನ ಜಗಳ ಕೈ ಮೀರುವ ಎಲ್ಲ ಲಕ್ಷಣ ಕಂಡುಬರುತ್ತಿದೆ.

ತೀವ್ರ ಖಿನ್ನತೆಗೊಳಗಾದ ಅಭಿಜಿತ್, ನಿಶಾಂತ್ ಭಟ್ ಬಳಿ ತೆರಳಿ ಹೇರ್ ಕಲರ್ ಪಾಕೆಟ್ ಅನ್ನು ಕೇಳಿದ್ದು ಅದನ್ನು ವಿಷದ ರೀತಿ ಕುಡಿಯುವುದಾಗಿ ಹೇಳಿದ್ದಾರೆ. ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನನಗೆ ಅತೀವ ಬೇಸರ ಉಂಟಾಗಿದೆ ಎಂದಿದ್ದಾರೆ.

ಇದನ್ನು ಕೇಳಿ ಶಾಕ್‌ಗೆ ಒಳಗಾದ ನಿಶಾಂತ್, ಅಭಿಜಿತ್ ಅವರನ್ನು ಸಮಾಧಾನಪಡಿಸಿದ್ದಾರೆ. ‘ಆ ರೀತಿಯ ಪದಗಳನ್ನು ಇನ್ನೆಂದೂ ಬಳಸಬೇಡ’ಎಂದು ತಿಳಿ ಹೇಳಿದ್ದಾರೆ. ಬಳಿಕ ಈ ಘಟನೆಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಅಭಿಜಿತ್, ನಿಶಾಂತ್ ಬಳಿ ಮನವಿ ಮಾಡಿದ್ದಾರೆ. ಆದರೆ, ಅವರ ಮಾತನ್ನು ಕೇಳದ ನಿಶಾಂತ್, ಅಭಿಜಿತ್ ವಿಷ ಕುಡಿಯಲು ಮುಂದಾಗಿದ್ದರು ಎಂದು ಮನೆಯ ಸದಸ್ಯರ ಎದುರು ಬಹಿರಂಗಪಡಿಸಿದ್ದಾರೆ.

ಈ ಮಧ್ಯೆ, ಅಂತಹ ನಿರ್ಧಾರಗಳನ್ನು ಎಂದಿಗೂ ಮಾಡಬೇಡಿ ಎಂದು ಅಭಿಜಿತ್‌ಗೆ ಪ್ರತೀಕ್ ಸೆಹಜ್ಪಾಲ್ಎಚ್ಚರಿಸಿದ್ದಾರೆ. ಬಿಗ್ ಬಾಸ್ ನಿಮ್ಮನ್ನು ಮನೆಯಿಂದ ಹೊರಹೋಗುವಂತೆ ಹೇಳಬಹುದು. ಅಫ್ಸಾನಾ ಖಾನ್ ಘಟನೆಯ ಉದಾಹರಣೆ ನೀಡಿದ ಪ್ರತೀಕ್, ಇಂತದ್ದೇ ಕಾರಣಕ್ಕೆ ಅವರನ್ನು ಮನೆಯಿಂದ ಹೊರಹಾಕಲಾಯಿತು ಎಂದು ತಿಳಿಸಿದರು.

ಏನಿದು ಘಟನೆ?: ಬಿಗ್ ಬಾಸ್ 15ರ ಇತ್ತೀಚಿನ ಸಂಚಿಕೆಯಲ್ಲಿ, ಮ್ಯೂಸಿಯಂ ಟಾಸ್ಕ್‌ನ ಸಂದರ್ಭದಲ್ಲಿ ದಿವೋಲಿನಾ ಅವರ ಕಲಾಕೃತಿಗಳನ್ನು ಕದ್ದಿದ್ದ ಅಭಿಜಿತ್, ಅದನ್ನು ವಾಪಸ್ ಕೊಡಬೇಕೆಂದರೆ ಪ್ರತಿಯಾಗಿ ಕೆನ್ನೆಗೆ ಮುತ್ತು ನೀಡುವಂತೆ ಒತ್ತಾಯಿಸಿದ್ದರು. ಇದನ್ನು ನಿರಾಕರಿಸಿದ ದಿವೋಲಿನಾ, ಸೌಜನ್ಯದ ಎಲ್ಲೆ ಮೀರದಂತೆ ಎಚ್ಚರಿಕೆ ನೀಡಿದ್ದರು.

ಅಭಿಜಿತ್‌ನ ಉದ್ದೇಶಗಳು ಕೆಟ್ಟದಾಗಿವೆ. ಹಾಗಾಗಿ, ನಾನು ಅವನೊಂದಿಗೆ ಮಾತನಾಡುವುದಿಲ್ಲ ಅಥವಾ ಅವನೊಂದಿಗೆ ಮತ್ತೆ ಸ್ನೇಹ ಬೆಳೆಸುವುದಿಲ್ಲ ಎಂದು ದಿವೋಲಿನಾ ಹೇಳಿದ್ದರು.

ಹಿಂದಿನ ಘಟನೆ ಕುರಿತಂತೆ ಅಭಿಜಿತ್ ಅವರು ಹಲವು ಬಾರಿ ಕ್ಷಮೆಯಾಚಿಸಿದ್ದಾರೆ. ಆದರೆ, ದಿವೋಲಿನಾ ಮಾತ್ರ ಅವರ ಮಾತನ್ನು ಕೇಳಲು ಸಿದ್ಧರಿಲ್ಲ. ಹೀಗಾಗಿ, ಅಭಿಜಿತ್ ಖಿನ್ನತೆಗೆ ಒಳಗಾಗಿದ್ಧಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು