ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ ಎನ್ನುವುದು ಪಕ್ಕಾ ರಾಜಕೀಯ: ನಟಿ ರಮ್ಯಾ ವ್ಯಾಖ್ಯಾನ

Last Updated 14 ನವೆಂಬರ್ 2021, 11:32 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗಷ್ಟೇ ‘ರಾಜಕೀಯ ಈಗ ಮುಗಿದುಹೋದ ಅಧ್ಯಾಯ’ ಎಂದು ಹೇಳಿ ನಟಿ, ಮಾಜಿ ಸಂಸದೆ ರಮ್ಯಾಸುದ್ದಿಯಾಗಿದ್ದರು. ಇದೀಗ ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ರಮ್ಯಾ ಅವರು ಮಾಡಿರುವ ವ್ಯಾಖ್ಯಾನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಸಿದ್ಧಾಂತದ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಹರಿಹಾಯ್ದಿದ್ದ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ‘ಹಿಂದೂ ಧರ್ಮ ಹಾಗೂ ಹಿಂದುತ್ವ ಎಂಬುವುದು ಬೇರೆಬೇರೆ. ಬಿಜೆಪಿ–ಆರ್‌ಎಸ್‌ಎಸ್‌ ಸಿದ್ಧಾಂತವು ದೇಶದಲ್ಲಿ ದ್ವೇಷಹರಡುತ್ತಿದೆ’ ಎಂದಿದ್ದರು.

ಇದರ ಬೆನ್ನಲ್ಲೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ರಮ್ಯಾ, ‘ಹಿಂದೂ ಧರ್ಮ ಹಾಗೂ ಹಿಂದುತ್ವ ಬೇರೆಬೇರೆ. ಹಿಂದೂ ಧರ್ಮ ಎನ್ನುವುದು ರಾಜಕೀಯವಲ್ಲ. ಆದರೆ ಹಿಂದುತ್ವ ಎನ್ನುವುದು ರಾಜಕೀಯ. ಹಿಂದೂ ಧರ್ಮ ಎಂದರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರ ಬಗ್ಗೆಯೂ ಇರುವ ಪ್ರೀತಿ. ಇದಕ್ಕೆ ವಿರುದ್ಧವಾಗಿದ್ದು ಹಿಂದುತ್ವ. ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ತಿಳಿದಿರಲಿದೆ’ ಎಂದು ಉಲ್ಲೇಖಿಸಿದ್ದಾರೆ. ರಮ್ಯಾ ಅವರ ಈ ಪೋಸ್ಟ್‌ ಅನ್ನು ವಿರೋಧಿಸಿ ಹಾಗೂ ಬೆಂಬಲಿಸಿ ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT