ಗುರುವಾರ , ಮಾರ್ಚ್ 30, 2023
24 °C

ಹಾಲಿವುಡ್​ ಆ್ಯಕ್ಷನ್ ​ಹೀರೊ ಖ್ಯಾತಿಯ ಲ್ಯಾನ್ಸ್​ ರೆಡ್ಡಿಕ್​ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಹಾಲಿವುಡ್‌ ಆ್ಯಕ್ಷನ್‌ ಹೀರೊ ಖ್ಯಾತಿಯ ಲ್ಯಾನ್ಸ್ ರೆಡ್ಡಿಕ್ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಪತ್ನಿ ಸ್ಟೆಫನಿ ರೆಡ್ಡಿಕ್, ಮಕ್ಕಳಾದ ನಿಕೋಲ್ ರೆಡ್ಡಿಕ್ ಮತ್ತು ಕ್ರಿಸ್ಟೋಫರ್ ರೆಡ್ಡಿಕ್ ಅವರನ್ನು ಅಗಲಿದ್ದಾರೆ.

ಲ್ಯಾನ್ಸ್ ಮಲಗಿದ್ದಲ್ಲೇ ನಿಧನರಾಗಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಇದು ಸಹಜ ಸಾವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಅವರ ಕುಟುಂಬದವರು ದೃಢಪಡಿಸಿದ್ದಾರೆ.

ಜಾನ್ ವಿಕ್, ದಿ ವೈರ್ ಸಿನಿಮಾಗಳು ಲ್ಯಾನ್ಸ್‌ಗೆ ಖ್ಯಾತಿಯನ್ನು ತಂದುಕೊಟ್ಟಿದ್ದವು. ಹಲವಾರು ವೆಬ್‌ ಸಿರೀಸ್‌ಗಳಲ್ಲೂ ಅವರು ಆ್ಯಕ್ಷನ್‌ ಹೀರೊ ಆಗಿ ನಟಿಸಿದ್ದರು. ಲ್ಯಾನ್ಸ್‌ ನಿಧನಕ್ಕೆ ಹಾಲಿವುಡ್‌ ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಚಲನಚಿತ್ರ ನಿರ್ಮಾಪಕ ಜೇಮ್ಸ್ ಗನ್, ನಾವು ಪ್ರತಿಭಾವಂತ ನಟನನ್ನು ಕಳೆದುಕೊಂಡಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು