ಗಡಿಯಾರ ನಿರ್ದೇಶಕರಿಂದ ‘ಹೊಸದಿಗಂತ’ ಸಿನಿಮಾ

‘ಗಡಿಯಾರ’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ಪ್ರಬಿಕ್ ಮೊಗವೀರ್ ಈಗ ‘ಹೊಸದಿಗಂತ’ ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಕೋವಿಡ್ ಪ್ರಕರಣಗಳು ತೀವ್ರವಾಗಿದ್ದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದರೂ ‘ಗಡಿಯಾರ’ ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಗುರುತಿಸಿಕೊಂಡಿತ್ತು. ‘ಹೊಸದಿಗಂತ’ ಸಿನಿಮಾ ಮನುಷ್ಯನ ಮಿದುಳಿನ ಮೇಲೆ ಹೆಣೆಯಲಾದ ಸಿನಿಮಾ. ‘ಸಂಥಿಂಗ್ ಅನೇಬಲ್ ಟು ಎಕ್ಸ್‌ಪ್ಲೈನ್’ ಎನ್ನುವ ಟ್ಯಾಗ್‌ಲೈನ್ ಹೊಂದಿರುವ ಚಿತ್ರದ ಪೋಸ್ಟರ್ ಅನ್ನು ಕೂಡ ಸಿನಿಮಾ ತಂಡ ಬಿಡುಗಡೆ ಮಾಡಿದೆ. ಕಥೆ, ಚಿತ್ರಕಥೆ, ನಿರ್ಮಾಣದ ಜವಾಬ್ದಾರಿಯನ್ನೂ ಪ್ರಬಿಕ್ ಮೊಗವೀರ್ ಹೊತ್ತಿದ್ದಾರೆ.
‘ಗಡಿಯಾರಕ್ಕಿಂತ ಈ ಸಿನಿಮಾ ವಿಭಿನ್ನವಾಗಿ ಇರಲಿದೆ. ಸಾಮಾಜಿಕ ಸಂದೇಶ ಇರುವ ಮನರಂಜನೆ ಚಿತ್ರ ಇದಾಗಲಿದೆ. ನಂಬಲು ಅಸಾಧ್ಯವಾದ ತನಿಖಾ ವರದಿಯನ್ನು ಮುಂದಿಡುವುದು ಕಥೆಯ ಮುಖ್ಯ ಉದ್ದೇಶ. ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಇದು ಕೂಡ ಬಹು ತಾರಾಗಣದ ಸಿನಿಮಾ. ನಟ, ನಟಿಯರ ಆಯ್ಕೆ ನಡೆಯುತ್ತಿದೆ’ ಎಂದು ನಿರ್ದೇಶಕ ಪ್ರಬಿಕ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.