ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: 23ರಂದು ‘ಯುವ’ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮ

Published 21 ಮಾರ್ಚ್ 2024, 7:31 IST
Last Updated 21 ಮಾರ್ಚ್ 2024, 7:31 IST
ಅಕ್ಷರ ಗಾತ್ರ

ಹೊಸಪೇಟೆ: ಡಾ.ರಾಜ್‌ಕುಮಾರ್ (ದೊಡ್ಮನೆ) ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಅಭಿನಯಿಸಿರುವ ಮೊದಲ ಸಿನಿಮಾ ’ಯುವ’ ಮಾರ್ಚ್‌ 29ರಂದು ಬಿಡುಗಡೆಯಾಗಲಿದ್ದು, ಇದರ ಬಿಡುಗಡೆ ಪೂರ್ವ ಅದ್ಧೂರಿ ‘ಯುವ ಸಂಭ್ರಮ’ ಕಾರ್ಯಕ್ರಮ ನಗರದಲ್ಲಿ ಇದೇ 23ರಂದು ನಡೆಯಲಿದೆ.

ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 6ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಡಾ.ರಾಜ್‌ ಕುಟುಂಬದ ಬಹುತೇಕ ಸದಸ್ಯರು, ನಟಿ ನಿಶ್ವಿಕಾ ನಾಯ್ಡು, ಸುಧಾರಾಣಿ, ನಟ ಅಚ್ಯುತ್ ಕುಮಾರ್, ಗಾಯಕ ವಿಜಯ ಪ್ರಕಾಶ್‌ ಇತರರು ಪಾಲ್ಗೊಳ್ಳುವರು ಎಂದು ಕಾರ್ಯಕ್ರಮವನ್ನು ಸಂಘಟಿಸಿರುವ ಡಿ.ಆರ್. ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ರಾಮು ಗೌಡ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸುತ್ತಿರುವ ಈ ‘ಯುವ’ ಸಿನಿಮಾವನ್ನು ಸಂತೋಷ್‌ ಆನಂದ್‌ ನಿರ್ದೇಶಿಸಿದ್ದಾರೆ. ಅಜನೀಶ್‌  ಲೋಕನಾಥ್‌ ಅವರ ಸಂಗೀತವಿದೆ. ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕುಟುಂಬ ಸಮೇತ ಬಂದು ಚಿತ್ರಮಂದಿರದಲ್ಲಿ ನೋಡುವಂತಹ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವ ಆಶಯ ಇದೆ ಎಂದು ಚಿತ್ರದ ನಿರ್ಮಾಣ ವ್ಯವಸ್ಥಾಪಕ ಮನೋಹರ್‌ ತಿಳಿಸಿದರು.

ಅಪ್ಪು ನೆಚ್ಚಿನ ತಾಣ: ‘ಪುನೀತ್‌ ರಾಜ್‌ಕುಮಾರ್ ಅವರಿಗೆ ಹೊಸಪೇಟೆ ಅಚ್ಚುಮೆಚ್ಚಿನ ತಾಣವಾಗಿತ್ತು. ಈ ಭಾಗದಲ್ಲಿ ಅಪ್ಪು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದಕ್ಕಾಗಿಯೇ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಹೊಸಪೇಟೆಯಲ್ಲೇ ನಡೆಸಲು ತೀರ್ಮಾನಿಸಲಾಯಿತು. ಚಾಮರಾಜನಗರದಲ್ಲಿ ಈ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು’ ಎಂದು ಅಪ್ಪು ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಹೇಳಿದರು.

12 ಸಾವಿರ ಆಸನ ವ್ಯವಸ್ಥೆ: ‘ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ಕಾರ್ಯಕ್ರಮ ಸಂಘಟಿಸಲು ಯಾವುದೇ ಅಡ್ಡಿ ಇಲ್ಲ, ಈಗಾಗಲೇ ಅಗತ್ಯದ ಅನುಮತಿ ಪಡೆಯಲಾಗಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ನೀತಿ ಸಂಹಿತೆಯ ಪ್ರಶ್ನೆ ಬರುವುದಿಲ್ಲ. ಒಟ್ಟು 12 ಸಾವಿರ ಆಸನದ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. 10ರಿಂದ 15 ಸಾವಿರ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT