ಸೋಮವಾರ, ಏಪ್ರಿಲ್ 19, 2021
28 °C

ನಟ ಧ್ರುವ ಸರ್ಜಾ ನೌಲಿ ಕ್ರಿಯಾ ಯೋಗ ಕಲಿತಿದ್ದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಗರು ಚಿತ್ರಕ್ಕಾಗಿ ದೈಹಿಕವಾಗಿ ಬಹಳಷ್ಟು ಪರಿಶ್ರಮಪಟ್ಟಿದ್ದ ನಟ ಧ್ರುವ ಸರ್ಜಾ, ಚಿತ್ರದ ಮೊದಲಾರ್ಧದಲ್ಲಿ ಬರುವ ಹಾಡೊಂದರಲ್ಲಿ ಮಲ್ಲಕಂಬದ ಮೇಲೆ ನೌಲಿ ಕ್ರಿಯಾ ಯೋಗ ಮಾಡಿ ಎಲ್ಲರ ಗಮನಸೆಳೆದಿದ್ದರು. 

ಇದೀಗ, ಆ ಯೋಗಾಭ್ಯಾಸವನ್ನು ಧ್ರುವ ಸರ್ಜಾ ಅವರು ಕಲಿತ ಕುರಿತು ಮೇಕಿಂಗ್‌ ವಿಡಿಯೊವನ್ನು ಚಿತ್ರ ತಂಡವು ಬಿಡುಗಡೆಗೊಳಿಸಿದೆ. ಈ ಕುರಿತು ಮಾತನಾಡಿರುವ ಧ್ರುವ, ‘ಹಂತ ಹಂತವಾಗಿ ಹೇಗೆ ನಾನು ನೌಲಿ ಕ್ರಿಯಾ ಯೋಗವನ್ನು ಕಲಿತೆ ಎನ್ನುವುದು ಮೇಕಿಂಗ್‌ನಲ್ಲಿದೆ. ಆ ಒಂದು ಅಭ್ಯಾಸ ಕಲಿಯಲು 30–40 ದಿನ ತೆಗೆದುಕೊಂಡೆ. ರಾಜ್‌ಕುಮಾರ್‌ ಅವರು ಅಭ್ಯಾಸ ಮಾಡುತ್ತಿದ್ದ ಆ ಒಂದು ಭಾಗವನ್ನಷ್ಟೇ ನಾನು ಪ್ರಯತ್ನಿಸಿದ್ದೇನೆ ಅವರು ಮಾಡುವ ಎಲ್ಲ ಯೋಗವನ್ನು ನನಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ರಾಜ್‌ಕುಮಾರ್‌ ಅವರು ದೊಡ್ಡ ಇನ್‌ಸ್ಟಿಟ್ಯೂಷನ್‌. ಅದರಲ್ಲಿನ ಒಂದು ಪದವಷ್ಟೇ ನಾನು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು