ಸೋಮವಾರ, ಜುಲೈ 4, 2022
23 °C

ಹೃತಿಕ್ ಫ್ಯಾಮಿಲಿ ಪಾರ್ಟಿಯಲ್ಲೂ ಕಾಣಿಸಿಕೊಂಡ ಆ ನಟಿ: ಇದು ಪಕ್ಕಾ ಎಂದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಾಲಿವುಡ್ ನಟ ಹೃತಿಕ್ ರೋಶನ್ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಹೃತಿಕ್ ಮುಖದಲ್ಲಿ ಹೊಸ ಕಳೆ ಬಂದಿದೆ’ ಎಂದು ಅನೇಕ ಅಭಿಮಾನಿಗಳು ಅವರ ಕಾಲೆಳೆಯುತ್ತಿದ್ದಾರೆ.

ಇದಕ್ಕೆಲ್ಲಾ ಕಾರಣ ಆ ಒಂದು ಹುಡುಗಿ ಎಂದು ಬಾಲಿವುಡ್ ಅಂಗಳದಲ್ಲಿ ಗುಲ್ಲೆದ್ದಿದೆ. ನಟಿ, ಸಂಗೀತ ನಿರ್ದೇಶಕಿ ಸಬಾ ಆಜಾದ್ ಹಾಗೂ ಹೃತಿಕ್ ಅವರದ್ದೇ ಬಾಲಿವುಡ್‌ನಲ್ಲಿ ಈಗ ದೊಡ್ಡ ಸುದ್ದಿ.

ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಕೈ ಕೈ ಹಿಡಿದುಕೊಂಡು ಓಡಾಡಿ ಸುದ್ದಿಯಾಗಿದ್ದ ಸಬಾ ಹಾಗು ಹೃತಿಕ್ ಅವರ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ಗುಸುಗುಸು ನಡುವೆ ಇದೀಗ ಹೃತಿಕ್ ಜೊತೆ ಮತ್ತೆ ಸಬಾ ಕಾಣಿಸಿಕೊಂಡಿದ್ದಾರೆ.

ಶಿವಾನಿ ದಾಂಡೇಕರ್ ಮದುವೆ ಪ್ರಯುಕ್ತ ತಮ್ಮ ಕುಟುಂಬದೊಂದಿಗೆ ಪಾರ್ಟಿ ಮಾಡಲು ರೋಶನ್ ಕುಟುಂಬ ಕಳೆದ ವೀಕೆಂಡ್‌ನಲ್ಲಿ ಸೇರಿತ್ತು. ಈ ವೇಳೆ ಸಂಗೀತ ನಿರ್ದೇಶಕ ಹಾಗೂ ಹೃತಿಕ್ ಚಿಕ್ಕಪ್ಪ ರಾಜೇಶ್ ರೋಶನ್ ಅವರು ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಹೃತಿಕ್ ತಂದೆ ರಾಕೇಶ್ ರೋಶನ್, ತಾಯಿ ಪಿಂಕಿ ರೋಶನ್ ಸೇರಿದಂತೆ ಅನೇಕ ಸ್ನೇಹಿತರು ಹಾಜರಿದ್ದರು.

ಈ ಪಾರ್ಟಿಯ ಫೋಟೊ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಜೇಶ್ ರೋಶನ್, ‘ಸಂತೋಷ ಎಂದರೆ ಕುಟುಂಬದ ಜೊತೆ ಕಾಲ ಕಳೆಯುವುದು, ಅದರಲ್ಲೂ ವೀಕೆಂಡ್‌ನಲ್ಲಿ’ ಎಂದು ಹೇಳಿಕೊಂಡಿದ್ದರು.

ಈ ಫೋಟೊದಲ್ಲಿ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದು ಸಬಾ ಆಜಾದ್. ಈ ಮೂಲಕ ಸಬಾ ಆಜಾದ್ ಹಾಗೂ ಹೃತಿಕ್ ಮಧ್ಯೆ ಏನೋ ನಡೆಯುತ್ತಿರುವುದು ಖಚಿತವಾಗಿದೆ ಎಂದು ಅನೇಕ ನೆಟ್ಟಿಗರು ಹೇಳಿದ್ದಾರೆ.

 

ರಾಜೇಶ್ ಪೋಸ್ಟ್‌ಗೆ ಕಮೆಂಟ್ ಮಾಡಿರುವ  ಸಬಾ, ‘ಇದು ನಾನು ಕಳೆದ ಅತ್ಯುತ್ತಮ ಭಾನುವಾರ’ ಎಂದು ಹೇಳಿದ್ದಾರೆ. ಹೃತಿಕ್ ಕೂಡ ಕಮೆಂಟ್ ಮಾಡಿದ್ದು, ‘ನೀವು ಹೇಳಿದ್ದು ನಿಜ ಚಿಕ್ಕಪ್ಪ’ ಎಂದಿದ್ದಾರೆ.

ಒಟ್ಟಿನಲ್ಲಿ ಬಾಲಿವುಡ್ ಮೋಸ್ಟ್ ಹ್ಯಾಂಡ್ಸಮ್ ನಟ ಹೃತಿಕ್ ಅವರು ತಮ್ಮ ಜೀವನದ ಹೊಸ ಇನ್ನಿಂಗ್ಸ್ ಪ್ರಾರಂಭಿಸಲು ಬಹಳ ತಯಾರಿ ನಡೆಸಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇಬ್ಬರ ನಡುವೆ ಡೇಟಿಂಗ್ ರೂಮರ್ ಕೇಳಿ ಬಂದಿದೆ.

ಇದನ್ನೂ ಓದಿ

ಸಬಾ ಆಜಾದ್ ಜತೆ ಕಾಣಿಸಿಕೊಂಡ ಬಾಲಿವುಡ್ ನಟ ಹೃತಿಕ್ ರೋಷನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು