ಹೈದರಾಬಾದ್: ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣ ಹಾಗೂ ಅದರೊಂದಿಗಿನ ಅಕ್ರಮ ಹಣ ವರ್ಗಾವಣೆ ಸಂಬಂಧ ನಟಿ ಮುಮೈತ್ ಖಾನ್ ಅವರು ಜಾರಿ ನಿರ್ದೇಶನಾಲಯ(ಇ.ಡಿ) ಎದುರು ಬುಧವಾರ ವಿಚಾರಣೆಗೆ ಹಾಜರಾದರು.

2017ರಲ್ಲಿ ನಡೆದ ಡ್ರಗ್ಸ್ ಪ್ರಕರಣ ಮತ್ತು ಅದಕ್ಕೆ ಸಂಪರ್ಕವಿರುವ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ತೆಲುಗು ಸಿನಿಮಾ ರಂಗದ ನಟ, ನಟಿ ಮತ್ತು ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಹತ್ತು ಮಂದಿಗೆ ನೋಟಿಸ್ ಜಾರಿ ಮಾಡಿತ್ತು. ಇಲ್ಲಿವರೆಗೂ ಏಳು ಮಂದಿ ವಿಚಾರಣೆಗೆ ಹಾಜರಾಗಿದ್ದು, ನಟಿ ಮುಮೈತಾ ಎಂಟನೆಯವರಾಗಿದ್ದಾರೆ.

ಮುಮೈತ್ ಖಾನ್ ಅವರು ತೆಲುಗು ಸೇರಿದಂತೆ, ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.

2017, ಜುಲೈ 2 ರಂದು ತೆಲಂಗಾಣದ ಅಬಕಾರಿ ಇಲಾಖೆಯು ಡ್ರಗ್ಸ್ ಜಾಲವೊಂದನ್ನು ಭೇದಿಸಿತ್ತು. ಈ ವೇಳೆ ಎಲ್ಎಸ್ಡಿ ಮತ್ತು ಎಂಡಿಎಂನಂತಹ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಅಮೆರಿಕದ ನಾಗರಿಕ ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ... ಡ್ರಗ್ಸ್ ಪ್ರಕರಣ: ಇ.ಡಿ. ಎದುರು ಹಾಜರಾದ ತೆಲುಗು ನಟ ರವಿತೇಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.