ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಆಗಲು ನಾನಿನ್ನೂ ಚಿಕ್ಕವಳು: ನಟಿ ರಶ್ಮಿಕಾ ಮಂದಣ್ಣ

Last Updated 16 ಫೆಬ್ರುವರಿ 2022, 11:25 IST
ಅಕ್ಷರ ಗಾತ್ರ

ಟಾಲಿವುಡ್‌ ಸ್ಟಾರ್‌ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಮಾತನಾಡಿದ್ದಾರೆ.

’ಇಂಡಿಯಾ ಟುಡೇ’ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ

’ಮದುವೆ ಆಗಲು ನಾನಿನ್ನೂ ಚಿಕ್ಕವಳು. ಮದುವೆ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ’ ಎಂದಿದ್ದಾರೆ. ಯಾರೇ ಆಗಲಿ ತಮಗೆ ಕಂಫರ್ಟಬಲ್​ ​ಎನಿಸುವವರ ಜೊತೆ ಇರಬೇಕು ಎಂದು ರಶ್ಮಿಕಾಹೇಳಿದ್ದಾರೆ.

’ಲವ್​ ಎಂದರೆ ಪರಸ್ಪರ ಟೈಮ್‌, ಗೌರವ ಕೊಡುವುದು. ಒಬ್ಬರ ಜತೆ ಸುರಕ್ಷಿತ ಭಾವ ಮೂಡುವುದೇ ಲವ್​ ಆಗಿದೆ. ಇದು ಭಾವನೆಗಳಿಗೆ ಸಂಬಂಧಿಸಿದ ವಿಷಯವಾದ್ದರಿಂದ ವಿವರಿಸುವುದು ಕಷ್ಟ. ಇಬ್ಬರ ಕಡೆಯಿಂದಲೂ ಸರಿ ಇದ್ದಾಗ ಮಾತ್ರ ಪ್ರೀತಿ ಫಲಿಸುತ್ತದೆ. ಇದು ಒಬ್ಬರ ಕಡೆಯಿಂದ ಸಾಧ್ಯವಿಲ್ಲ’ ಎಂದು ರಶ್ಮಿಕಾತಿಳಿಸಿದ್ದಾರೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇರುವ ಈ ನಟಿ ‘ಪುಷ್ಪ’ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಬಾಲಿವುಡ್​ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ, ಅಮಿತಾಭ್​ ಬಚ್ಚನ್​ ಮುಂತಾದ ಟಾಪ್​ ನಾಯಕರುಗಳಜೊತೆ ಅವರು ನಟಿಸುತ್ತಿದ್ದಾರೆ

ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ನಿಶ್ಚಿತಾರ್ಥ ಬಹಳ ಹಿಂದೆಯೇ ಮುರಿದುಬಿತ್ತು. ಸದ್ಯ ಅವರು ತೆಲುಗು ನಟ ವಿಜಯ್‌ ದೇವರಕೊಂಡ ಜತೆ ಆಪ್ತವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT