ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಯ ಚಿಂತನೆಯೊಂದಿಗೇ ಹಲವು ವರ್ಷ ಜೀವಿಸಿದ್ದೆ: ಅಮೆರಿಕದ ಗಾಯಕಿ ಗೊಮೆಜ್‌

Last Updated 4 ನವೆಂಬರ್ 2022, 15:35 IST
ಅಕ್ಷರ ಗಾತ್ರ

‘ನಾನು ಎಂದೂ ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ. ಆದರೆ, ಹಲವು ವರ್ಷಗಳ ಕಾಲ ಅದರ ಆಲೋಚನೆಯಲ್ಲೇ ಜೀವಿಸಿದ್ದೆ’ ಎಂದು ಗಾಯಕಿ ಸೆಲೆನಾ ಗೊಮೆಜ್ ಬಹಿರಂಗಪಡಿಸಿದ್ದಾರೆ.

ಸೆಲೆನಾ ಮೇರಿ ಗೊಮೆಜ್ ಅಮೆರಿಕನ್ ಗಾಯಕಿಯಾಗಿದ್ದು, ನಟನೆಯಲ್ಲೂ ಮಿಂಚಿದ್ದಾರೆ. ನಿರ್ಮಾಪಕಿ ಕೂಡ ಹೌದು. ಮಕ್ಕಳ ಟಿವಿ ಸರಣಿ ‘ಬಾರ್ನೆ ಆ್ಯಂಡ್‌ ಫ್ರೆಂಡ್ಸ್‌’ನಲ್ಲಿ ಗೊಮೆಜ್ ತಮ್ಮ ನಟನಾ ಚಾತುರ್ಯ ಪ್ರದರ್ಶಿಸಿದ್ದರು. ‘ಡಿಸ್ನಿ ಚಾನೆಲ್ ಟೆಲಿವಿಷನ್’ ಸರಣಿಯಾದ ‘ವಿಝಾರ್ಡ್ಸ್ ಆಫ್ ವೇವರ್ಲಿ ಪ್ಲೇಸ್‌’ನಲ್ಲಿ ಅಲೆಕ್ಸ್ ರುಸ್ಸೋ ಆಗಿ ನಟಿಸಿದ್ದ ಅವರು ಜನಪ್ರಿಯತೆ ಗಳಿಸಿದ್ದರು.

‘ಬೈಪೋಲಾರ್ ಡಿಸಾರ್ಡರ್‌’ ಎಂಬ ಕಾಯಿಲೆಯಿಂದ ಬಳಲುತ್ತಿರುವ ಗೊಮೆಜ್‌, ಅಮೆರಿಕದ ನಿಯತಕಾಲಿಕೆ ‘ರೋಲಿಂಗ್ ಸ್ಟೋನ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

‘ನಾನು ಎಂದೂ ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ. ಆದರೆ, ಹಲವು ವರ್ಷಗಳ ಕಾಲ ಅದರ ಆಲೋಚನೆಯಲ್ಲೇ ಜೀವಿಸಿದ್ದೆ. ನಾನು ಇಲ್ಲದಿದ್ದರೆ ಜಗತ್ತು ಉತ್ತಮವಾಗಿರುತ್ತದೆ ಎಂದು ಭಾವಿಸಿದ್ದೆ. ಕೆಲವೊಮ್ಮೆ ವಾರಗಳ ಕಾಲ ನಾನು ಹಾಸಿಗೆಯಲ್ಲೇ ಮಲಗಿರುತ್ತೇನೆ. ಕೆಳಗಿಳಿಯುವಾಗ ನನಗೆ ಉಸಿರುಗಟ್ಟಿದ ಅನುಭವವಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಖಿನ್ನತೆಗೆ ಜಾರುವುದು, ಉನ್ಮಾದದಲ್ಲಿ ತೇಲಾಡುವುದು ‘ಬೈಪೋಲಾರ್‌ ಡಿಸಾರ್ಡರ್‌’ ಕಾಯಿಲೆಯ ಲಕ್ಷಣಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT