ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IIFA Awards 2024 | 'ಅನಿಮಲ್‌' ಅತ್ಯುತ್ತಮ ಚಿತ್ರ: ಶಾರುಕ್ ಖಾನ್ ಅತ್ಯುತ್ತಮ ನಟ

Published : 29 ಸೆಪ್ಟೆಂಬರ್ 2024, 4:22 IST
Last Updated : 29 ಸೆಪ್ಟೆಂಬರ್ 2024, 4:22 IST
ಫಾಲೋ ಮಾಡಿ
Comments

ಮುಂಬೈ: ಬಾಲಿವುಡ್‌ ನಟ ರಣಬೀರ್ ಕಪೂರ್ ಅಭಿನಯದ ‘ಅನಿಮಲ್‌‘ ಸಿನಿಮಾ ಇಂಡಿಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಅಕಾಡೆಮಿಯ(ಐಐಎಫ್‌ಎ) ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.

ಜವಾನ್ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಸೂಪರ್‌ಸ್ಟಾರ್ ಶಾರುಕ್ ಖಾನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಯಿತು. ‘ಮಿಸಸ್‌ ಚಟರ್ಜಿ vs ನಾರ್ವೆ‘ ಚಿತ್ರದಲ್ಲಿ ನಾಯಕಿ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರಾಣಿ ಮುಖರ್ಜಿ ಪಡೆದರು.

ಅತ್ಯುತ್ತಮ ಹಿಂದಿ ಚಲನಚಿತ್ರಗಳನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ವಿದೇಶದಲ್ಲಿ ಐಐಎಫ್‌ಎ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತದೆ. ಅಬುಧಾಬಿಯ ಯಾಸ್ ದ್ವೀಪದ ಯಾಸ್ ಬೇ ವಾಟರ್‌ಫ್ರಂಟ್‌ನ ಭಾಗವಾದ ಎತಿಹಾಡ್ ಅರೆನಾದಲ್ಲಿ ಕಾರ್ಯಕ್ರಮ ನಡೆಯಿತು.

’12th ಫೇಲ್‘ ಸಿನಿಮಾದ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅತ್ತುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಅನಿಮಲ್‌ ಸಿನಿಮಾದಲ್ಲಿ ಅಭಿನಯಿಸಿದ್ದ ಅನಿಲ್ ಕಪೂರ್ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ಹಾಗೇ ಬಾಬಿ ಡಿಯೋಲ್ ಅತ್ಯುತ್ತಮ ಖಳ ನಟ ಪ್ರಶಸ್ತಿ ಪಡೆದರು.

ನಟ ವಿಕ್ಕಿ ಕೌಶಲ್ ಮತ್ತು ನಿರ್ದೇಶಕ ಕರಣ್ ಜೋಹರ್ ಐಐಎಫ್‌ಎ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಿಕೊಟ್ಟರು. ನಿರ್ದೇಶಕ ಮಣಿರತ್ನಂ ಮತ್ತು ಸಂಗೀತ ನಿರ್ದೇಶ ಎ.ಆರ್‌ ರೆಹಮಾನ್‌ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT