ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವೇ ನನಗೆ ಸರ್ವಸ್ವ: ಕೆನಡಾ ಪಾಸ್‌ಪೊರ್ಟ್ ತ್ಯಜಿಸುವ ಬಗ್ಗೆ ಅಕ್ಷಯ್ ಕುಮಾರ್

Last Updated 23 ಫೆಬ್ರುವರಿ 2023, 12:10 IST
ಅಕ್ಷರ ಗಾತ್ರ

ನವದೆಹಲಿ: ಕೆನಡಾ ಪೌರತ್ವ ಹೊಂದಿರುವ ಬಗ್ಗೆ ಆಗಾಗ್ಗೆ ಟೀಕೆ ಎದುರಿಸುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ನನಗೆ ಭಾರತವೇ ಸರ್ವಸ್ವ. ಈಗಾಗಲೇ ಪಾಸ್‌ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಖಾಸಗಿ ಚಾನಲ್‌ನ ‘ಸೀದಿ ಬಾತ್’ಕಾರ್ಯಕ್ರಮದ ಮೊದಲ ಕಂತಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕೆನಡಾ ಪೌರತ್ವ ಏಕೆ ಪಡೆದೆ ಎಂಬುದರ ಕಾರಣ ತಿಳಿಯದೆ ಕೆಲವರು ಮಾತನಾಡುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದು ಅವರು ಹೇಳಿದರು.

‘ಭಾರತವೇ ನನಗೆ ಸರ್ವಸ್ವ. ನಾನು ಏನನ್ನು ಸಂಪಾದಿಸಿದ್ದೇನೊ.. ಏನನ್ನು ಪಡೆದುಕೊಂಡಿದ್ದೇನೊ.. ಅದೆಲ್ಲವೂ ಇಲ್ಲಿಂದಲೆ... ಒಂದು ವಿಷಯದ ಬಗ್ಗೆ ಏನೂ ತಿಳಿದುಕೊಳ್ಳದೆ ಜನರು ಮಾತನಾಡಿದಾಗ ಅತ್ಯಂತ ನೋವಾಗುತ್ತದೆ’ಎಂದು 55 ವರ್ಷದ ನಟ ಹೇಳಿದ್ದಾರೆ.

ಹೆರಾ ಫೆರಿ, ನಮಸ್ತೆ ಲಂಡನ್, ಟಾಯ್ಲೆಟ್; ಏಕ್ ಪ್ರೇಮ್ ಕಥಾ, ಪ್ಯಾಡ್ ಮ್ಯಾನ್ ಮುಂತಾದ ಚಿತ್ರಗಳಿಂದ ಗಮನ ಸೆಳೆದಿರುವ ಅಕ್ಷಯ್, ತಮ್ಮ ವೃತ್ತಿ ಜೀವನದಲ್ಲಿ 15 ಫ್ಲಾಪ್ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. 90ರ ದಶಕದಲ್ಲಿ ತಮ್ಮ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದರಿಂದ ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸುವಂತಾಯಿತು ಎಂದಿದ್ದಾರೆ.

‘ನನ್ನ ಚಿತ್ರಗಳು ಬಾಕ್ಸಾಫಿಸ್‌ನಲ್ಲಿ ಸೋಲುತ್ತಿದ್ದವು. ಬೇರೆ ಕೆಲಸ ಹುಡುಕುವ ಸ್ಥಿತಿ ಬಂದಿತ್ತು. ಕೆನಡಾದಲ್ಲಿದ್ದ ನನ್ನ ಸ್ನೇಹಿತ ಬುಲಾವ್ ನೀಡಿದ್ದ. ಹಾಗಾಗಿ ಉದ್ಯೋಗಕ್ಕಾಗಿ ತೆರಳಿದ್ದೆ’ಎಂದು ಅವರು ಹೇಳಿದ್ದಾರೆ.

‘ಆ ಸಂದರ್ಭ ನನ್ನ ಎರಡು ಚಿತ್ರಗಳ ಬಿಡುಗಡೆ ಬಾಕಿ ಇತ್ತು. ಅದೃಷ್ಟವಶಾತ್ ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆದವು. ಆಗ ನನ್ನ ಗೆಳೆಯ ಮತ್ತೆ ಭಾರತಕ್ಕೆ ಹೋಗಿ ಚಿತ್ರರಂಗದಲ್ಲಿ ಮುಂದುವರಿಯುವಂತೆ ಸೂಚಿಸಿದ. ಬಳಿಕ, ನನಗೆ ಮತ್ತಷ್ಟು ಚಿತ್ರಗಳು ಬಂದವು. ಕೈತುಂಬಾ ಕೆಲಸವೂ ಸಿಕ್ಕಿತು. ನಾನು ಕೆನಡಾ ಪಾಸ್‌ಪೋರ್ಟ್ ಹೊಂದಿದ್ದನ್ನೇ ಮರೆತಿದ್ದೆ. ಪಾಸ್‌ಪೋರ್ಟ್ ಅನ್ನು ಬದಲಾಯಿಸಬೇಕು ಎಂಬ ಯೋಚನೆಯೂ ನನಗೆ ಬಂದಿರಲಿಲ್ಲ. ಈಗ ನನ್ನ ಪಾಸ್‌ಪೋರ್ಟ್ ಅನ್ನು ಬದಲಾಯಿಸಲು ಅರ್ಜಿ ಸಲ್ಲಿಸಿದ್ದೇನೆ’ಎಂದು ಅಕ್ಷಯ್ ಕುಮಾರ್ ಹೇಳಿದರು.

ಏಪ್ರಿಲ್ 2019ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ, ನರೇಂದ್ರ ಮೋದಿ ಜೊತೆಗಿನ ಸಂದರ್ಶನದ ಬಳಿಕ ಅಕ್ಷಯ್ ಕುಮಾರ್ ಪೌರತ್ವ ವಿವಾದ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT