ಮಂಗಳವಾರ, ಅಕ್ಟೋಬರ್ 26, 2021
21 °C

ಸಿಂಗಪುರ: ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ ‘ಗುರುನಾನಕ್‌’ ಕಿರುಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಗ‍ಪುರ: ಸಿಂಗಪುರ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಿಖ್‌ ದಂಪತಿ, ಸಿಖ್‌ ಗುರು ಗುರುನಾನಕ್‌ ಅವರು ಭೇಟಿ ನೀಡಿದ್ದ ಸ್ಥಳಗಳ ಕುರಿತು ವಿವರಿಸುವ 24 ಕಂತುಗಳ ಕಿರುಚಿತ್ರವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.

TheGuruNanak.com ಜಾಲತಾಣದಲ್ಲಿ ತಾನು (ಅಮರ್‌ದೀಪ್‌ ಸಿಂಗ್‌) ಮತ್ತು ಪತ್ನಿ ವಿನಿಂದರ್‌ ಕೌರ್‌ ಯಾವುದೇ ಶುಲ್ಕ ವಿಧಿಸದೆ ವಾರದ ಸಂಚಿಕೆಗಳಾಗಿ ಕಿರುಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಇದು ಡೌನ್‌ಲೋಡ್‌ಗೂ ಲಭ್ಯವಿರುತ್ತದೆ ಎಂದು ಸಿಂಗ್‌ ಶುಕ್ರವಾರ ಹೇಳಿದರು. 

ಲಾಸ್ಟ್‌ ಹೆರಿಟೇಜ್‌ ಪ್ರೊಡಕ್ಷನ್ಸ್‌ ಮತ್ತು ಸಿಖ್‌ ಲೆನ್ಸ್‌ ಪ್ರೊಡಕ್ಷನ್ಸ್‌ ಸಂಸ್ಥೆಗಳು ನಿರ್ಮಿಸುತ್ತಿರುವ ಈ ಕಿರುಚಿತ್ರದ ಪಂಜಾಬ್‌ ಮತ್ತು ಹಿಂದಿ ಅವತರಣಿಕೆಗಳನ್ನು ಮುಂದಿನ ಹಂತದಲ್ಲಿ ಬಿಡುಗಡೆ ಮಾಡಲಾಗುವುದು ಎಂದೂ ಅವರು ಹೇಳಿದರು.  

ಅನೇಕ ಭೌಗೋಳಿಕ ಸವಾಲುಗಳು ಚಿತ್ರೀಕರಣಕ್ಕೆ ಸವಾಲು ಒಡ್ಡಿದ್ದವು. ಗುರುನಾನಕ್‌ ಅವರು ಸಂಚರಿಸಿದ ಶೇ 70 ರಷ್ಟು ಪ್ರದೇಶಗಳು ಈಗ ಕಾಲಗರ್ಭದಲ್ಲಿ ಹುದುಗಿ ಹೋಗಿವೆ. ಕಷ್ಟಕರ ಪರಿಸ್ಥಿತಿಯಲ್ಲಿ ಸ್ಥಳಗಳನ್ನು ಪತ್ತೆಹಚ್ಚಿ ಚಿತ್ರತಂಡವು ಚಿತ್ರೀಕರಣ ಮುಗಿಸಿದೆ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು