ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದವೆಬ್ಬಿಸಿದ ‘ಕೇರಳ ಸ್ಟೋರಿ’: ಪೊಲೀಸರಿಂದ ತನಿಖೆ ಆರಂಭ

Last Updated 10 ನವೆಂಬರ್ 2022, 9:58 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಕೇರಳವನ್ನು ಇಸ್ಲಾಮಿಕ್‌ ಭಯೋತ್ಪಾದನೆಯ ತಾಣವೆಂದು ಬಿಂಬಿಸಿರುವ‘ದಿ ಕೇರಳ ಸ್ಟೋರಿ’ ಸಿನಿಮಾ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸುದೀಪ್ತೊ ಸೆನ್‌ ನಿರ್ದೇಶಿಸಿ ಬಾಲಿವುಡ್‌ ನಟಿ ಅದಾ ಶರ್ಮಾ ನಟಿಸಿರುವ ಕೇರಳ ಸ್ಟೋರಿ ಸಿನಿಮಾದ ಟೀಸರ್‌ ನ.3ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡು ಸಂಚಲನ ಮೂಡಿಸಿತ್ತು.

ಕೇರಳವನ್ನು ಭಯೋತ್ಪಾದಕ ಮಹಿಳೆಯರ ಮತಾಂತರ ತವರು ಎನ್ನುವ ಈ ಟೀಸರ್‌ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ತಮಿಳುನಾಡು ಮೂಲದ ಪತ್ರಕರ್ತರೊಬ್ಬರು ದೂರನ್ನು ದಾಖಲಿಸಿ, ಚಿತ್ರದಲ್ಲಿ ಹೇಳಿರುವ ವಿಷಯದ ಮಾಹಿತಿಗೆ ದಾಖಲೆ ಕೇಳಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ರಾಜ್ಯ ಪೊಲೀಸರಿಗೆ ದೂರಿನ ತನಿಖೆಗೆ ಆದೇಶಿಸಿದ್ದಾರೆ. ಟೀಸರ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ಕೂಡ ದಾಖಲಾಗಿದೆ.

ಕೇರಳದ ಸುಮಾರು 10 ಸಾವಿರ ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡಿದ್ದು ಇಸ್ಲಾಮಿಕ್‌ ದೇಶಗಳಾದ ಅಫ್ಗಾನಿಸ್ತಾನ, ಯಮನ್‌ ಮತ್ತು ಸಿರಿಯಾದಲ್ಲಿ ಭಯೋತ್ಪಾದಕರಾಗಿದ್ದಾರೆ ಎಂದು ಟೀಸರ್‌ನಲ್ಲಿ ತೋರಿಸಲಾಗಿತ್ತು.

ಮತಾಂತರದ ಅಪಾಯದಲ್ಲಿ ಸಿಲುಕಿದ ಹಿಂದೂ ಮಹಿಳೆಯೊಬ್ಬರ ಪಾತ್ರದಲ್ಲಿ ಅದಾ ಶರ್ಮಾ ಕೇರಳದಲ್ಲಿನ ಮತಾಂತರದ ಬಗ್ಗೆ ಮಾತನಾಡುತ್ತಾರೆ. ಬುರ್ಖಾ ತೊಟ್ಟಿರುವ ಮಹಿಳೆ ‘ನಾನೀಗ ಫಾತಿಮಾ ಬ, ಅಪಘಾನಿಸ್ತಾನ ಜೈಲಿನಲ್ಲಿರುವ ಐಸಿಸ್‌ ಉಗ್ರ ಮಹಿಳೆ. ನಾನೊಬ್ಬಳೇ ಇಲ್ಲ. ಇದೇ ರೀತಿ ಮತಾಂತರಗೊಂಡ 32 ಸಾವಿರ ಹೆಣ್ಣುಮಕ್ಕಳಿದ್ದಾರೆ. ಕೇರಳದಲ್ಲಿಯೇ ಈ ಭಯಾನಕ ಮತಾಂತರದ ಆಟ ನಡೆಯುತ್ತಿದೆ’ ಎಂದು ಟೀಸರ್‌ನಲ್ಲಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT