ಬೆಂಗಳೂರು: ಬಾಲಿವುಡ್ ಹಾಗೂ ಟಾಲಿವುಡ್‌ನ ಬೇಡಿಕೆಯ ನಟಿ, ಕನ್ನಡತಿ ಪೂಜಾ ಹೆಗ್ಡೆ ಬಾಲಿವುಡ್ ನಟನಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

ಹೌದು, ಬಾಲಿವುಡ್ ಸುದ್ದಿಗಳನ್ನು ಪ್ರಸಾರ ಮಾಡುವ ಮನರಂಜನೆ ಹಾಗೂ ಮ್ಯೂಸಿಕ್‌ವಾಹಿನಿಗಳು ಮತ್ತು ನ್ಯೂಸ್ ಸೈಟ್‌ಗಳು ಪೂಜಾ ಹೆಗ್ಡೆ ಅವರು ರೋಹನ್ ಮೆಹ್ರಾಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿವೆ. ಇವರಿಬ್ಬರು ಸಾರ್ವಜನಿಕ ಸ್ಥಳಗಳು, ಹೊಟೇಲ್, ಪಬ್‌ಗಳಲ್ಲಿ ಸುತ್ತಾಡುತ್ತಿದ್ದಾರೆ ಎಂದು ವರದಿ ಮಾಡಿವೆ.

ಪೂಜಾ ಹೆಗ್ಡೆ

ರೋಹನ್ ಮೆಹ್ರಾ ಬಾಲಿವುಡ್ ಹಿರಿಯನನಟ ವಿನೋದ್ ಮೆಹ್ರಾ ಅವರ ಪುತ್ರ. 2019ರಲ್ಲಿ ಬಿಡುಗಡೆಯಾದ ಬಜಾರ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದರ್ಪಣೆ ಮಾಡಿರುವ ರೋಹನ್, ಪೂಜಾ ಹೆಗ್ಡೆಯ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

ಆದಾಗ್ಯೂ ಡೇಟಿಂಗ್ ಕುರಿತಂತೆ ಇಬ್ಬರು ಎಲ್ಲಿಯೂ ಕೂಡ ಬಾಯಿ ಬಿಟ್ಟಿಲ್ಲ. ಹೊಸ ವರ್ಷದ ಸಂಭ್ರಮದಲ್ಲಿರುವ ಈ ಜೋಡಿ ಮುಂಬೈನ ಹಲವು ಪ್ರೇಕ್ಷಣೀಯಸ್ಥಳಗಳಲ್ಲಿ ಸುತ್ತುತ್ತಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ರೋಹನ್ ಮೆಹ್ರಾ

ತೆಲುಗಿನ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಪೂಜಾ ಹೆಗ್ಡೆ ಸ್ಟೈಲಿಶ್ ಸ್ಟಾರ್‌ಅಲ್ಲು ಅರ್ಜುನ್ ಜೊತೆನಟಿಸಿದ್ದು ಈ ಸಿನಿಮಾಭರ್ಜರಿ ಓಪನಿಂಗ್ ಪಡೆಯುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಆದಾಗ್ಯೂ ಈ ಮುದ್ದಾದ ಜೋಡಿಗೆ ಅಭಿಮಾನಿಗಳು ಸೈ ಎಂದಿದ್ದಾರೆ. ಪೂಜಾ ಮತ್ತು ರೋಹನ್ ಗಾಸಿಪ್ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿರುವ ಪೂಜಾ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.