ಮಂಗಳವಾರ, ಆಗಸ್ಟ್ 20, 2019
27 °C

ಇಶಾನ್‌- ಅನನ್ಯಾ ಜೋಡಿ ತೆರೆಗೆ

Published:
Updated:
Prajavani

‘ಧಡಕ್‌’ ಸಿನಿಮಾದ ನಂತರ ನಟಿ ಜಾಹ್ನವಿ ಕಪೂರ್‌ ಮೂರು– ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಇಶಾನ್‌ ಖಟ್ಟರ್‌ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ ತಮ್ಮ ಎರಡನೇ ಸಿನಿಮಾದ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ. 

ಈ ಚಿತ್ರದಲ್ಲಿ ಇಶಾನ್‌ಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ನಿರ್ದೇಶಕ ಅಲೀ ಅಬ್ಬಾಸ್‌ ಜಾಫರ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅಲೀ ಅವರ ಬಳಿ ಅಸಿಸ್ಟೆಂಟ್‌ ನಿರ್ದೇಶಕರಾಗಿದ್ದ ವರುಣ್‌ ಶರ್ಮ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ಇದು ರೋಮ್ಯಾಂಟಿಕ್‌ ಚಿತ್ರ. ಅಲೀ ಹಾಗೂ ಇಶಾನ್‌ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಚಿತ್ರೀಕರಣವು ಡಿಸೆಂಬರ್‌ ತಿಂಗಳಲ್ಲಿ ಆರಂಭವಾಗಲಿದೆ. 

Post Comments (+)