ಸೋಮವಾರ, ಆಗಸ್ಟ್ 2, 2021
20 °C

ನಟಿ ಜಾಕ್ವೆಲಿನ್‌ಗೆ 'ಸ್ವಲ್ಪ ಜೋಪಾನ' ಎಂದು ಅನೂಪ್‌ ಭಂಡಾರಿ ಹೇಳಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ ಸಿನೆಮಾದಲ್ಲಿ ನಟಿಸಿರುವ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ವಿಕ್ರಾಂತ್‌ ರೋಣ ಚಿತ್ರದ ನಿರ್ದೇಶಕ ಅನೂಪ್‌ ಭಂಡಾರಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಬರೆದುಕೊಂಡಿದ್ದಾರೆ.

ಜಾಕ್ವೆಲಿನ್‌ ಜೊತೆಗಿನ ಚಿತ್ರವನ್ನು ಪೋಸ್ಟ್‌ ಮಾಡಿರುವ ಅನೂಪ್‌ ಭಂಡಾರಿ, 'ಚಂದನವನಕ್ಕೆ ಸ್ವಾಗತ ಜಾಕ್ವೆಲಿನ್‌ ಫರ್ನಾಂಡಿಸ್‌! ನಿಮ್ಮೊಂದಿಗೆ ಕೆಲಸ ಮಾಡಿದ್ದು ಸಂತಸ ತಂದಿದೆ. ನಿಮ್ಮ ಫಸ್ಟ್‌ ಲುಕ್‌ ಮತ್ತು ಪಾತ್ರದ ಹೆಸರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅದನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಡಬ್ಬಿಂಗ್ ಸ್ಟುಡಿಯೊದಲ್ಲಿ ಮತ್ತೊಮ್ಮೆ ಭೇಟಿಯಾಗೋಣ. ಅಲ್ಲಿಯವರೆಗೆ - ಸ್ವಲ್ಪ ಜೋಪಾನ' ಎಂದು ತಿಳಿಸಿದ್ದಾರೆ.

ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌ ಚಿತ್ರ ‘ವಿಕ್ರಾಂತ್‌ ರೋಣ’ ಆಗಸ್ಟ್‌ 19ರಂದು ತೆರೆಯ ಮೇಲೆ ಬರಲಿದೆ.

ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿರುವ ಸುದೀಪ್‌, ‘ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಸಿದ್ದತೆ ಮತ್ತು ಪ್ರಕ್ರಿಯೆಯ ಖುಷಿಯನ್ನು ಅನುಭವಿಸಿದ ನಂತರ ಈಗ ‘ರೋಮಾಂಚನಕಾರಿ’ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ. ವಿಕ್ರಾಂತ್ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ತಿಳಿಸಲು ನಮ್ಮ ವಿಕ್ರಾಂತ್ ರೋಣ ತಂಡವು ಹರ್ಷಿಸುತ್ತದೆ’ ಎಂದು ತಿಳಿಸಿದ್ದಾರೆ.

ಚಿತ್ರದ ಟೀಸರ್‌ ಹಾಗೂ ಕಟೌಟ್‌ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ರಾರಾಜಿಸಿ ವಿಶ್ವದ ಗಮನಸೆಳೆದಿತ್ತು.

ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜ್ಯಾಕ್‌ ಮಂಜು ಈ ಚಿತ್ರದ ನಿರ್ಮಾಪಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು