ಡಬ್ಬಿಂಗ್‌: ಸಂವಿಧಾನವೇ ಸರಿ ಅಂದ ಮೇಲೆ ನಮ್ಮದೇನು ಇಲ್ಲ!– ಜಗ್ಗೇಶ್‌

7

ಡಬ್ಬಿಂಗ್‌: ಸಂವಿಧಾನವೇ ಸರಿ ಅಂದ ಮೇಲೆ ನಮ್ಮದೇನು ಇಲ್ಲ!– ಜಗ್ಗೇಶ್‌

Published:
Updated:

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ ಕನ್ನಡದಲ್ಲಿ ಡಬ್ಬಿಂಗ್‌ ಕುರಿತಂತೆ ಟ್ವೀಟ್ ಮಾಡಿದ್ದು ನನಗೂ ಮತ್ತು ಡಬ್ಬಿಂಗ್‌ಗೂ ಯಾವುದೇ ಸಂಬಂಧ ಇಲ್ಲ, ಕನ್ನಡಿಗರಿಗೆ ಏನು ಇಷ್ಟವೋ ಅದನ್ನು ನೋಡಲು, ಪಡೆಯಲು ಸರ್ವಸ್ವತಂತ್ರರು ಎಂದು ಹೇಳಿದ್ದಾರೆ. 

ಇತ್ತೀಚೆಗೆ ಜಗ್ಗೇಶ್‌ ಡಬ್ಬಿಂಗ್‌ ವಿರೋಧದ ಸಭೆಯಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಚಿತ್ರೋದ್ಯಮದಲ್ಲಿ ಕೆಲವರು ಅವರ ಬಗ್ಗೆ ಅಪಾರ್ಥ ಕಲ್ಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಜಗ್ಗೇಶ್‌ ಗುರುವಾರ ಟ್ವೀಟ್‌ ಮಾಡಿ, ನನಗೂ ಮತ್ತು ಡಬ್ಬಿಂಗ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಡಬ್ಬಿಂಗ್: ಎರಡು ಮುಖಗಳು

ಜಗ್ಗೇಶ್ ಅವರ ಟ್ವೀಟ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು  669 ಜನರು ಲೈಕ್‌ ಮಾಡಿದ್ದಾರೆ. 70 ಜನರು ರೀಟ್ವೀಟ್ ಮಾಡಿದ್ದು, 69 ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

ಜಗ್ಗೇಶ್‌ ಟ್ವೀಟ್‌ ಸಾರಾಂಶ

ನಾನು ಬದುಕಿನಲ್ಲಿ ಶ್ರಮದಿಂದ ಮುಂದೆ ಬಂದವನು!!ಕನಸಿನಲ್ಲಿಯು ಯಾರಿಗು ಕೆಟ್ಟದ್ದು ಬಯಸಿಲ್ಲಾ ಬಯಸೋಲ್ಲಾ!ರಾಯರ ಭಕ್ತರು ತಪ್ಪುಮಾಡುವರಲ್ಲಾ..! ನನಗೆ ನನ್ನ ಕನ್ನಡಭಾಷೆ ಕನ್ನಡಜನರೆ ದೇವರು ಎಂದು ಭಾವಿಸಿ ಶ್ರದ್ಧೆಯಿಂದ ಯಾವತಪ್ಪು ಮಾಡದೆ ಬದುಕಿರುವೆ. ನನ್ನ ಮೇಲಿನ ಅಪಾರ್ಥ ಸರಿಪಡಿಸಲು. ಈ ಬರಹ..ಓದಿ ಭಿನ್ನಾಭಿಪ್ರಾಯ ಇದ್ದರೆ ಮರೆತುಬಿಡಿ! ವಿನಂತಿ!

ಇದನ್ನೂ ಓದಿ: ಡಬ್ಬಿಂಗ್‌ ವಿವಾದದ ಸುತ್ತ

ಪ್ರಾಮಾಣಿಕ ಅನಿಸಿಕೆ... ಮಾನ್ಯರೆ 36 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ದುಡಿದ ನಾನು ಚಿತ್ರರಂಗದ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಉದ್ಯಮ ಕರೆದ ಡಬ್ಬಿಂಗ್‌ ವಿರೋಧದ ಸಭೆಗೆ ನಾನು ಹೋಗಿದ್ದು ನಿಜ. ನಮ್ಮ ಆಕ್ರೋಷವು ನಿಜ! ಆದರೆ ಇದೆಲ್ಲಾ ನಮ್ಮ ಕಲಾವಿದರು ಮತ್ತು ತಂತ್ರಜ್ಞರಿಗಾಗಿ ಮಾತ್ರವೆ ವಿನಹ ಯಾವ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲಾ! ಸಂವಿಧಾನವೇ ಸರಿ ಅಂದ ಮೇಲೆ ನಮ್ಮದೇನು ಇಲ್ಲ!

ಕನ್ನಡಿಗರಿಗೆ ಏನು ಇಷ್ಟವೋ ಅದನ್ನು ನೋಡಲು, ಪಡೆಯಲು ಸರ್ವಸ್ವತಂತ್ರರು. ಇನ್ನು ಮುಂದೆ ನನಗೂ ಡಬ್ಬಿಂಗ್‌ಗೂ ಯಾವುದೇ ಸಂಬಂಧ ಇರುವುದಿಲ್ಲಾ! ನಾನಾಯಿತು, ನನ್ನ ಕಲಾ ಕರ್ತವ್ಯವಾಯಿತು... ನನ್ನ ಹಿಂದಿನ ನಡಾವಳಿಗಳಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಜಗ್ಗೇಶ್‌ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಸಮಾನ ಭಾಷಾನೀತಿ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಅರುಣ್‌ ಜಾವಗಲ್‌ ಅವರು ಜಗ್ಗೇಶ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.  

ನಿನ್ನೆ ಜಗ್ಗೇಶ್ ರವರು,ತಮಗೂ ಡಬ್ಬಿಂಗ್ ಗೂ ಯಾವುದೇ ಸಂಬಂಧವಿಲ್ಲ. ಕನ್ನಡಿಗರು ತಮಗೆ ಬೇಕಾದ್ದನ್ನು ನೋಡಲು ಸರ್ವ ಸ್ವತಂತ್ರರು ಎನ್ನುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.. ಕನ್ನಡಿಗರ ಆಯ್ಕೆ ಸ್ವಾತಂತ್ರವನ್ನು ಗೌರವಿಸಿದ ಜಗ್ಗೇಶ್ ರವರಿಗೆ ಧನ್ಯವಾದಗಳು. ಇನ್ನಾದರೂ ಉದ್ಯಮ ಡಬ್ಬಿಂಗ್ ತಡೆಯುವುದನ್ನು ನಿಲ್ಲಿಸಲಿ... ಎಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. 

ಜಗ್ಗೇಶ್‌ ಟ್ವೀಟ್‌ಗೆ ಕೆಲವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

 

ಇವನ್ನೂ ಓದಿ

ಡಬ್ಬಿಂಗ್‌ ಬರಲಿ; ಆದರೆ...?

ಕನ್ನಡದಲ್ಲಿ ಮತ್ತೆ ಶುರುವಾದ ಡಬ್ಬಿಂಗ್

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !