Photos: ಬರ್ಲಿನ್ ನಗರದಲ್ಲಿ ಬೆಡಗಿ ಜಾಹ್ನವಿ ಕಪೂರ್: ವರುಣ್ ದವನ್ ಜೊತೆ ದಢಕ್ ಹುಡುಗಿಯ ಸುತ್ತಾಟ
ಬೆಂಗಳೂರು: ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಪ್ರವಾಸ ಪ್ರಿಯೆ. ಅವರು ಆಗಾಗ ದೇಶ ವಿದೇಶಗಳಿಗೆ ಸುತ್ತುತ್ತಾ ತಮ್ಮ ಅಭಿಮಾನಿಗಳ ಜೊತೆ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ.ಇತ್ತೀಚೆಗೆ ಜರ್ಮನಿಯ ಬರ್ಲಿನ್ಗೆ ತೆರಳಿದ್ದ ಈ ದಢಕ್ ಹುಡುಗಿ ಜಾಹ್ನವಿ ಇಡೀ ಬರ್ಲಿನ್ ನಗರವನ್ನು ಸುತ್ತು ಹೊಡೆದು ಪ್ರವಾಸದ ಮೋಜು ಅನುಭವಿಸಿದ್ದಾರೆ.ಈ ವೇಳೆ ನಟ ವರುಣ್ ದವನ್ ಅವರು ಕೂಡ ಜಾಹ್ನವಿಗೆ ಸಾತ್ ಕೊಟ್ಟಿದ್ದರು.ಇನ್ನು ಇತ್ತೀಚೆಗಷ್ಟೇ ರೂಹಿ ಸಿನಿಮಾ ಜಾಹ್ನವಿ ಅವರ ಕಡೆಯ ಚಿತ್ರವಾಗಿತ್ತು. ಇದನ್ನು ಹೊರತುಪಡಿಸಿ ಗುಡ್ ಲಕ್ ಜರ್ರಿ, ಮಿ ಹಾಗೂ ಮಿಸ್ಟರ್ ಆಂಡ್ ಮಿಸಸ್ ಮಾಹಿ ಮತ್ತು ಬಾವಾಲ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.