ಗುರುವಾರ , ಮೇ 26, 2022
23 °C
ಶ್ರೀದೇವಿ ಮಗಳ ಹರ್ಷ

ಸ್ಲಿಮ್ ಅಪ್ಪ ಜಾನ್ವಿ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮ್ಮ ಶ್ರೀದೇವಿ ತೀರಿಹೋದ ನಂತರ ಮಗಳು ಜಾನ್ವಿ ಕಪೂರ್ ಅಪ್ಪನ ಆರೋಗ್ಯದ ಜವಾಬ್ದಾರಿ ಹೊತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ  ಈಚೆಗೆ ಬೋನಿ ಕಪೂರ್ ಬರೋಬ್ಬರಿ 12 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಅಪ್ಪ ತೂಕ ಇಳಿಸಿಕೊಂಡದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಮಗಳು ಜಾನ್ವಿ, ಸೂಟುಬೂಟು ತೊಟ್ಟು ಸ್ಲಿಮ್ ಆಗಿರುವ ಅಪ್ಪನ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. 

‘ಅಪ್ಪ 12 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್, ಟ್ರಿಮ್ ಆಗಿರುವ ಅಪ್ಪ ಈಗ ಮುಂಚಿಗಿಂತ ಆರೋಗ್ಯವಾಗಿದ್ದಾರೆ. ಅಪ್ಪನ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ’ ಎಂದು ಜಾನ್ವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಗುಂಜನ್ ಸಕ್ಸೇನಾ ಅವರ ಬಯೋಪಿಕ್‌ನಲ್ಲಿ ಅಭಿನಯಿಸುತ್ತಿರುವ ಜಾನ್ವಿ, ಈಚೆಗಷ್ಟೇ ಲಖನೌದಲ್ಲಿ ಶೂಟಿಂಗ್ ಮುಗಿಸಿ ವಾಪಸ್ ಬಂದಿದ್ದಾರೆ.

ಬೋನಿ ಕಪೂರ್ ಅವರ ಮೊದಲ ಹೆಂಡತಿಯ ಮಗ ಅರ್ಜುನ್ ಕಪೂರ್, ಸಂಜಯ್ ಕಪೂರ್ ಮಗಳು ಶ್ಯಾನಾಯ ಕಪೂರ್ ಜತೆಗೆ ಆತ್ಮೀಯವಾಗಿರುವ ಜಾನ್ವಿ, ತುಂಬು ಕುಟುಂಬದ ಜತೆಯಲ್ಲಿ ಅಮ್ಮನ ಸಾವಿನ ದುಃಖ ಮರೆಯಲು ಯತ್ನಿಸುತ್ತಿದ್ದಾರೆ.  ಜಾನ್ವಿ ಸದ್ಯಕ್ಕೆ ಕರಣ್ ಜೋಹರ್ ನಿರ್ದೇಶನದ ತಖ್ತ್, ರಾಜ್‌ಕುಮಾರ್ ರಾವ್ ಅಭಿನಯದ ‘ರೂ ಅಫ್ಜಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು