ಬಹುನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ಬಹು ಭಾಷೆಗಳಲ್ಲಿ ಮಾ. 25 ರಂದು ತೆರೆಕಾಣಲಿದೆ ಎಂದು ಚಿತ್ರ ತಂಡ ಘೋಷಿಸಿದೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಸಿನಿಮಾ ಬಿಡುಗಡೆಯನ್ನು ಕೋವಿಡ್-19 ಕಾರಣದಿಂದ ಮುಂದೂಡಲಾಗಿತ್ತು. ಈ ಮೊದಲು ಸಿನಿಮಾವು ಮಾರ್ಚ್ 18 ಅಥವಾ ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು.

ಜ. 1 ರಂದು ಚಿತ್ರತಂಡ ಆರ್‌ಆರ್‌ಆರ್ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂದು ಘೋಷಿಸಿದ್ದರು. ನಂತರ, ಅವರು ಎರಡು ತಾತ್ಕಾಲಿಕ ದಿನಾಂಕಗಳನ್ನು ನೀಡಿದ್ದರು. ಆದರೆ ಈಗ ಅಂತಿಮವಾಗಿ, RRR ಸಿನಿಮಾ ಬಹು ಭಾಷೆಗಳಲ್ಲಿ ಮಾ. 25 ರಂದು ತೆರೆಕಾಣಲಿದೆ. ಈ ಬಗ್ಗೆ ಇಂದು ಟ್ವಿಟರ್‌ನಲ್ಲಿ ಅಧಿಕೃತ ಪ್ರಕಟಣೆಯನ್ನು ನೀಡಲಾಗಿದೆ.#RRRonMarch25th, 2022... ಅಂತಿಮಗೊಳಿಸಲಾಗಿದೆ! ಎಂದು ಹೇಳಿದ್ದಾರೆ.

ಎಸ್‌ಎಸ್ ರಾಜಮೌಳಿ ಅವರ ನಿರ್ದೇಶನದ ಈ ಚಿತ್ರವು ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಶ್ರೇಯಾ ಶರಣ್ ಮತ್ತು ಸಮುದ್ರಕನಿ ಸೇರಿದಂತೆ ಬಹು ತಾರಾಗಣವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.