ಸಿನಿಮಾ ಮೂರು ವರ್ಷ ತಡವಾಗಿದೆ. ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಬೆನ್ನಿಗೆ ಪೆಟ್ಟಾಗಿತ್ತು. ಇದರಿಂದಾಗಿ ಒಂದು ವರ್ಷ ಸಂಪೂರ್ಣ ವಿಶ್ರಾಂತಿಯಲ್ಲಿದ್ದೆ. ಇದುವೇ ಸಿನಿಮಾ ವಿಳಂಬವಾಗಲು ಮುಖ್ಯ ಕಾರಣ. ರವಿಚಂದ್ರನ್ ಅವರ ಜೊತೆ ಇಪ್ಪತ್ತೈದು ದಿನ ಕೆಲಸ ಮಾಡಲು ಅವಕಾಶ ದೊರಕಿರುವುದು ಪುಣ್ಯ. ಹೊಸ ನಟರಿಗೆ ಇಂತಹ ಅವಕಾಶ ಸಿಗುವುದು ವಿರಳ.