ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ ವೈಕುಂಠಪುರಂ ಲೋ’ ವಿಶೇಷ ಹಾಡಿನಲ್ಲಿ ಕಾಜಲ್‌

Last Updated 26 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಅಲ್ಲು ಅರ್ಜುನ್ ಸದ್ಯ ‘ಅಲ ವೈಕುಂಠಪುರಂ ಲೋ’ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ವಿಶೇಷ ಹಾಡೊಂದಕ್ಕೆ ಕಾಜಲ್‌ ಅಗರ್‌ವಾಲ್‌ ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ‘ಆರ್ಯ 2’ ಹಾಗೂ ‘ಎವಡು’ ಚಿತ್ರದಲ್ಲಿ ಕಾಜಲ್ ಹಾಗೂ ಅಲ್ಲು ಅರ್ಜುನ್ ಜೊತೆಯಾಗಿ ನಟಿಸಿದ್ದರು.

ಈಗ ಕಾಜಲ್‌ ಅಗರ್‌ವಾಲ್‌ ಕೈಯಲ್ಲಿ ಎರಡು ಮೂರು ಸಿನಿಮಾಗಳಿವೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ ‘ರಣರಂಗಂ’ ಹಾಗೂ ‘ಕೋಮಲಿ’ ಚಿತ್ರ ಆಗಸ್ಟ್‌ 15ರಂದು ಬಿಡುಗಡೆಯಾಗಿ, ಬಾಕ್ಸ್‌ ಆಫೀಸಿನಲ್ಲಿ ಒಳ್ಳೆ ಗಳಿಕೆ ಮಾಡುತ್ತಿವೆ. ಈಗ ತ್ರಿವಿಕ್ರಮ ಶ್ರೀನಿವಾಸ ನಿರ್ದೇಶನದ ‘ಅಲ ವೈಕುಂಠಪುರಂ ಲೋ’ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ನಟಿಸಲು ಕಾಜಲ್‌ ಒಪ್ಪಿಗೆ ನೀಡಿದ್ದಾರೆ.

ಹಾಡಿನ ಚಿತ್ರೀಕರಣಕ್ಕೆ ಹೈದರಾಬಾದ್‌ನಲ್ಲಿ ಬೃಹತ್ತಾದ ಸೆಟ್‌ ನಿರ್ಮಾಣ ಮಾಡಲಾಗಿದೆ. ಸದ್ಯದಲ್ಲೇ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಪೂಜಾ ಹಾಗೂ ಅಲ್ಲು ಅರ್ಜುನ್‌ ಜೊತೆಯಾಗಿ ನಟಿಸುತ್ತಿರುವ ಎರಡನೇ ಚಿತ್ರ. ಇದರಲ್ಲಿ ತಬು, ಜಯರಾಂ, ಸತ್ಯರಾಜ್‌, ಮುರಳಿ ಶರ್ಮಾ ಮೊದಲಾದವರು ನಟಿಸಿದ್ದಾರೆ.

ಈ ಚಿತ್ರದ ಶೇಕಡ 70ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದ ಹೆಸರನ್ನು ಇತ್ತೀಚೆಗೆ ಚಿತ್ರತಂಡ ಘೋಷಿಸಿದ್ದು, ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸದ್ಯದಲ್ಲೇ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT