‘ಇಂಡಿಯನ್‌–2’ಗಾಗಿ ಕಳರಿ ಕಲಿತ ಕಾಜಲ್

7
Kajal-kalari

‘ಇಂಡಿಯನ್‌–2’ಗಾಗಿ ಕಳರಿ ಕಲಿತ ಕಾಜಲ್

Published:
Updated:
Deccan Herald

ನಿವೃತ್ತ ಸೇನಾನಿ ಪಾತ್ರಧಾರಿಯಾಗಿ ನಟ ಕಮಲ್ ಹಾಸನ್ ‘ಇಂಡಿಯನ್’ ಸಿನಿಮಾದಲ್ಲಿ ಮಿಂಚಿದ್ದು ನೆನಪಿರಬೇಕಲ್ಲ. ಈಗ ‘ಇಂಡಿಯನ್–2’ ಚಿತ್ರ ತಯಾರಾಗುತ್ತಿದ್ದು, ಕಮಲ್ ಜತೆಗೆ ಪ್ರಧಾನ ಪಾತ್ರದಲ್ಲಿ ನಟಿ ಕಾಜಲ್ ಅಗರ್‌ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ ಈ ಚಿತ್ರಕ್ಕಾಗಿಯೇ ಕಾಜಲ್ ಕೇರಳದ ಮಾರ್ಷಲ್ ಆರ್ಟ್‌ ಕಳರಿಪಯಟ್ಟು ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರಂತೆ. ಕಮಲ್ ಅವರಂಥ ಹಿರಿಯ ಕಲಾವಿದನ ಜತೆ ನಟಿಸುವುದು ಒಂದು ರೀತಿಯ ಥ್ರಿಲ್ ಅನಿಸಿದರೆ ಮತ್ತೊಂದೆಡೆ ಶಂಕರ್ ಅವರಂಥ ನಿರ್ದೇಶಕರ ಸಿನಿಮಾದಲ್ಲಿ ಅಭಿನಯಸಿತ್ತಿರುವುದು ಮತ್ತೊಂದು ರೀತಿಯ ಅನುಭೂತಿ ನೀಡುತ್ತಿದೆ ಎಂದು ಕಾಜಲ್ ಖುಷಿಯಿಂದ ಹೇಳಿಕೊಂಡಿದ್ದಾರೆ.

ಕಳರಿಪಯಟ್ಟು ಕಲಿಯುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಜಲ್, ಕಳರಿ ಕುರಿತ ಪುಸ್ತಕವನ್ನು ಓದುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ. ‘ಅಂಡ್ ಸೋ ಇಟ್ ಬಿಗಿನ್ಸ್’ ಎನ್ನುವ ಶೀರ್ಷಿಕೆಯನ್ನೂ ಇದಕ್ಕೆ ನೀಡಿದ್ದಾರೆ.

‘ಇಂಡಿಯನ್–2’ ಸಿನಿಮಾದ ಚಿತ್ರೀಕರಣ ಡಿಸೆಂಬರ್‌ನಲ್ಲೇ ಆರಂಭವಾಗಬೇಕಿತ್ತು. ಆದರೆ, ಚಿತ್ರದ ಸೆಟ್‌ ವರ್ಕ್ ಇನ್ನೂ ಪೂರ್ಣಗೊಂಡಿರದ ಕಾರಣ, ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ.  ಈ ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನವಿದ್ದು, ರವಿವರ್ಮ ಛಾಯಾಗ್ರಾಹಣದ ಉಸ್ತುವಾರಿ ಹೊತ್ತಿದ್ದಾರೆ. ಚಿತ್ರ 2020ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ‘ಕ್ವೀನ್ ’ಚಿತ್ರದ ತಮಿಳು ರಿಮೇಕ್ ‘ಪ್ಯಾರಿಸ್ ಪ್ಯಾರಿಸ್’ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿದ್ದು, ಈ ಸಿನಿಮಾವನ್ನು ಕನ್ನಡ ನಟ ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !