ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಾರಾಜ್ಞಿ– ದಿ ಕ್ವೀನ್ ಆಫ್ ಕ್ವೀನ್ಸ್' ಟೀಸರ್: ಮತ್ತೆ ಒಂದಾದ ಕಾಜೋಲ್–ಪ್ರಭುದೇವ

ತೆಲುಗಿನ ಚರಣತೇಜ್ ಉಪ್ಪಾಲಪಾಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭುದೇವ ಹಾಗೂ ಕಾಜೋಲ್ ಮುಖ್ಯಭೂಮಿಕೆಯಲ್ಲಿದ್ದಾರೆ.
Published 28 ಮೇ 2024, 14:19 IST
Last Updated 28 ಮೇ 2024, 14:19 IST
ಅಕ್ಷರ ಗಾತ್ರ

ಬೆಂಗಳೂರು: ಬರೋಬ್ಬರಿ 27 ವರ್ಷಗಳಿಂದ ನಂತರ ಒಂದಾಗಿರುವ ಭಾರತದ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಹಾಗೂ ಬಾಲಿವುಡ್ ತಾರೆ ಕಾಜೋಲ್ ದೇವಗನ್ ಅವರ ಹೊಸ ಚಿತ್ರ ‘ಮಹಾರಾಜ್ಞಿ– ದಿ ಕ್ವೀನ್ ಆಫ್ ಕ್ವೀನ್ಸ್’ ತೆರೆಗೆ ಬರಲು ಸಜ್ಜಾಗಿದೆ.

ತೆಲುಗಿನ ಚರಣತೇಜ್ ಉಪ್ಪಾಲಪಾಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭುದೇವ ಹಾಗೂ ಕಾಜೋಲ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಇಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

1997ರಲ್ಲಿ ಬಿಡುಗಡೆಯಾಗಿದ್ದ ‘ಮಿನ್ಸಾರಾ ಕನವು’ ಎಂಬ ತಮಿಳು ಚಿತ್ರದಲ್ಲಿ ಕಾಜಲ್–ಪ್ರಭುದೇವ ಒಟ್ಟಾಗಿ ನಟಿಸಿದ್ದರು. ಹಲವು ಹಿಟ್ ಹಾಡುಗಳನ್ನು ನೀಡಿದ್ದ ಈ ಸಿನಿಮಾ ಕಾಜಲ್ ಅವರಿಗೆ ಸೌತ್‌ನಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

‘ಮಹಾರಾಜ್ಞಿ– ದಿ ಕ್ವೀನ್ ಆಫ್ ಕ್ವೀನ್ಸ್’ ಸಿನಿಮಾ ಆಕ್ಷನ್– ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು ವೆಂಕಟ್ ದೊರೆಗಿಲ್ಲು ಹಾಗೂ ಹರ್ಮನ್ ಬೇವೆಜಾ ಅವರಿಂದ ನಿರ್ಮಾಣವಾಗುತ್ತಿದೆ.

ಸದ್ಯಕ್ಕೆ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನಾಷಿರುದ್ದೀನ್ ಶಾ, ಜಿಸ್ಸು ಸೇನಗುಪ್ತಾ, ಸಂಯುಕ್ತಾ ಮೆನನ್ ಸೇರಿದಂತೆ ಹಲವರು ಪ್ರಮುಖ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT