ನಟ ಕೋಮಲ್ ತಮ್ಮ ಅಣ್ಣ ನವರಸ ನಾಯಕ ಜಗ್ಗೇಶ್ ಅವರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆದರೆ ಇದು ಸಿನಿಮಾದಲ್ಲಿ ಅಲ್ಲ, ಬದಲಾಗಿ ಸಿನಿಮಾದೊಳಗೆ ಇರುವ ಸಿನಿಮಾದಲ್ಲಿ. ಕೋಮಲ್ ಚಿತ್ರದ ಪಾತ್ರದಲ್ಲಿ ನಿರ್ದೇಶಕ.

ಮತಿವಣನ್ ನಿರ್ದೇಶಿಸಿರುವ ಕೋಮಲ್ ಅಭಿನಯದ ‘ಕಾಲಾಯ ನಮಃ’ ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿದ್ದು, ಇತ್ತೀಚೆಗೆ ಜಗ್ಗೇಶ್ ಹಾಗೂ ಕೋಮಲ್ ಜೊತೆಯಾಗಿ ನಟಿಸುವ ದೃಶ್ಯಗಳನ್ನು ಸೆರೆಹಿಡಿಯಲಾಯಿತು. ಹಾಡೊಂದಕ್ಕೆ ಹೆಜ್ಜೆ ಹಾಕಿದ ಜಗ್ಗೇಶ್ ಅವರು ಒಬ್ಬ ಕಲಾವಿದನ ಪಾತ್ರದಲ್ಲಿ ತಮ್ಮನ ಸಿನಿಮಾಗೆ ಸಾಥ್ ನೀಡಿದರು.

‘ನನಗಿಂತ ಕೋಮಲ್ ಉತ್ತಮ ನಟ. ಅವನು ಬೇರೆ ಭಾಷೆಯಲ್ಲಿ ಇದ್ದಿದ್ದರೆ ಹೆಚ್ಚು ಬಾಳಿಕೆ ಬರುತ್ತಿದ್ದ ಎಂದು ನನಗೆ ಅನಿಸುತ್ತದೆ. ಒಂದು ವರ್ಷದ ಬಳಿಕ ಈ ಸಿನಿಮಾ ಮೂಲಕ ಮತ್ತೆ ಬಣ್ಣಹಚ್ಚಿದ್ದೇನೆ. ಇದರಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಮೂವರೂ ನಟಿಸಿದ್ದೇವೆ’ ಎಂದರು ಜಗ್ಗೇಶ್.

‘‘ಕಾಲಾಯ ನಮಃ ಸಿನಿಮಾ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ. ಅಕ್ಟೋಬರ್–ನವೆಂಬರ್ನಲ್ಲಿ ಸಿನಿಮಾ ರಿಲೀಸ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾಯಕಿಯಾಗಿ ಆಸಿಯಾ ಫಿರ್ದೋಸ್ ನಟಿಸಿದ್ದಾರೆ. ಪ್ರಕಾಶ್ ರಾಜ್, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ, ಯತಿರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಬಳಿಕ ‘ಯಲಾ ಕುನ್ನಿ’, ‘ರೋಲೆಕ್ಸ್’, ಹೆಂಡ್ತಿ ರೋಬೊ ಆಗಿದ್ದರೆ ಹೇಗಿರುತ್ತದೆ ಎನ್ನುವ ಕಥೆ ಇರುವ ‘ಹುಕುಂ’ ಚಿತ್ರಗಳಲ್ಲಿ ತೊಡಗಿಸಿಕೊಳ್ಳಲಿದ್ದೇನೆ’’ ಎನ್ನುತ್ತಾರೆ ಕೋಮಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.