ಬುಧವಾರ, ಆಗಸ್ಟ್ 17, 2022
28 °C

ಕಂಗನಾ ರನೌತ್‌ ನಟನೆಯ ಧಾಕಡ್ ಅಕ್ಟೋಬರ್ 1ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಂಗನಾ ರನೌತ್ ನಟನೆಯ 'ಧಾಕಡ್‌' ಸಿನಿಮಾ ಅಕ್ಟೋಬರ್‌ 1ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಹೊಸ ಪೋಸ್ಟರ್‌ ಹಂಚಿಕೊಂಡು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಈ ನಟಿ. ಈ ಚಿತ್ರದಲ್ಲಿ ಅರ್ಜುನ್ ರಾಮ್‌ಪಾಲ್ ಹಾಗೂ ದಿವ್ಯಾ ದತ್ತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಪೋಸ್ಟರ್‌ನಲ್ಲಿ ಕಂಗನಾ ಉಗ್ರರೂಪಿಯಾಗಿ ಕಾಣಿಸಿಕೊಂಡಿದ್ದಾರೆ. ಧಾಕಡ್‌ನಲ್ಲಿ ಏಜೆಂಟ್ ಅಗ್ನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಕಂಗನಾ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿರುವ ಕಂಗನಾ ‘ಇವಳು ಅಂಜಿಕೆಯಿಲ್ಲದವಳು ಹಾಗೂ ಉಗ್ರರೂಪಿ. ಇವಳು ಏಜೆಂಟ್ ಅಗ್ನಿ. ಇದು ಭಾರತದ ಮೊದಲ ಮಹಿಳಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಧಾಕಡ್‌ ಅಕ್ಟೋಬರ್ 21ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

 

ಈ ಹಿಂದೆ ಸಿನಿಮಾ ಕುರಿತು ಮಾತನಾಡಿದ್ದ ಕಂಗನಾ ‘ಧಾಕಡ್‌ ನನ್ನ ವೃತ್ತಿಜೀವನಕ್ಕೆ ಮಾತ್ರವಲ್ಲ, ಭಾರತೀಯ ಸಿನಿ ಇತಿಹಾಸಕ್ಕೆ ಹೊಸ ತಿರುವು ಕೊಡಲಿದೆ. ಇದು ದೊಡ್ಡ ಬಜೆಟ್‌ನ ಸಿನಿಮಾ. ಅಲ್ಲದೇ ಮಹಿಳಾ ಕೇಂದ್ರಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವೂ ಹೌದು’ ಎಂದಿದ್ದರು.

 

ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಭಾರತೀಯ ಸಿನಿ ಇತಿಹಾಸದಲ್ಲಿ ಹೆಣ್ಣುಮಕ್ಕಳು ಹಿಂದೆ ತಿರುಗಿ ನೋಡುವ ಮಾತೇ ಇರುವುದಿಲ್ಲ. ಸೊಹೆಲ್ ಹಾಗೂ ರಾಝಿ ನನ್ನ ಸ್ನೇಹಿತರು. ನಾವು ಮೂವರು ಸೇರಿ ಈ ಪ್ರಾಜೆಕ್ಟ್‌ ಅನ್ನು ಯೋಜಿಸಿದ್ದೆವು. ಸಿನಿಮಾದ ಬಗ್ಗೆ ನಾನು ಉತ್ಸುಕಳಾಗಿದ್ದೇನೆ’ ಎಂದಿದ್ದರು.

ಚಿಂತನ್ ಗಾಂಧಿ ಹಾಗೂ ರಿನಿಶ್‌ ರವೀಂದ್ರ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಸೊಹೆಲ್‌ ಮಕ್ಲೈ ಪ್ರೊಡಕ್ಷನ್ ಹಾಗೂ ಅಸಿಲಂ ಫಿಲ್ಮ್ಸ್ ಕ್ಯುಕಿ ಡಿಜಿಟಲ್ ಮಿಡಿಯಾ ಸಹಯೋಗದೊಂದಿಗೆ ಹಣ ಹೂಡಿಕೆ ಮಾಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು