ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್ಸ್ ಧರಿಸಿ ಬರುವ ಮೂರ್ಖರಿಗೆ ದೇವಸ್ಥಾನ ಪ‍್ರವೇಶ ನೀಡಬಾರದು: ಕಂಗನಾ ರನೌತ್

Published 27 ಮೇ 2023, 4:04 IST
Last Updated 27 ಮೇ 2023, 4:04 IST
ಅಕ್ಷರ ಗಾತ್ರ

ವಿವಾದ, ದಿಟ್ಟ ಅಭಿಪ್ರಾಯಗಳ ಮೂಲಕವೇ ಪ್ರಸಿದ್ದಿ ಪಡೆದಿರುವ ಬಾಲಿವುಡ್‌ ನಟಿ ಕಂಗನಾ ರನೌತ್, ಇದೀಗ ದೇವಸ್ಥಾನದೊಳಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಬಟ್ಟೆ ವಿಚಾರಕ್ಕೆ ವ್ಯಾಟಿಕನ್‌ ಸಿಟಿಯಲ್ಲಿರುವ ಸುಪ್ರಸಿದ್ಧ ಚರ್ಚ್ ಒಳಗೆ ತಮಗೆ ಪ್ರವೇಶ ನಿರಾಕರಿಸಿದ್ದರು ಎಂಬ ವಿಚಾರವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

ಹುಡುಗಿಯೊಬ್ಬಳು ಹಿಮಾಚಲ ಪ್ರದೇಶದ ಕಂಗ್ರಾದಲ್ಲಿರುವ ಬೈಜನಾಥ ದೇವಸ್ಥಾನಕ್ಕೆ ಶಾರ್ಟ್ಸ್‌ ಧರಿಸಿ ಹೋಗಿದ್ದು, ಈ ವಿಚಾರವನ್ನು ಟ್ವೀಟಿಗರೊಬ್ಬರು ಫೋಟೊ ಸಮೇತ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಪಬ್‌, ನೈಟ್‌ಕ್ಲಬ್‌ಗೆ ಹೋಗುವಂತೆ ದೇವಸ್ಥಾನಕ್ಕೆ ಬಂದಿದ್ದಾರೆ. ಇಂತವರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಬಾರದು. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ನನ್ನ ಅಭಿಪ್ರಾಯ ತಪ್ಪೋ ಸರಿಯೊ ಗೊತ್ತಿಲ್ಲ. ಏನೇ ಆದರೂ ನನ್ನ ಅಭಿಪ್ರಾಯಕ್ಕೆ ನಾನು ಬದ್ಧಳಾಗಿದ್ದೇನೆ‘ ಎಂದು ಟ್ವೀಟಿಗರು ಬರೆದುಕೊಂಡಿದ್ದರು.

ಈ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿರುವ ಕಂಗನಾ ರನೌತ್, ಈ ವಿಷಯದಲ್ಲಿ ತಮ್ಮ ಅಭಿಪ್ರಾಯವೂ ಇದೇ ಆಗಿರುವುದಾಗಿ ಹೇಳಿದ್ದಾರೆ. ‘ಇದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಅವರೇ ಆವಿಷ್ಕರಿಸಿದ ಬಟ್ಟೆಯಾಗಿದೆ. ಹಿಂದೊಮ್ಮೆ ವ್ಯಾಟಿಕನ್‌ ಸಿಟಿಗೆ ಹೋಗಿದ್ದಾಗ, ಶಾರ್ಟ್ಸ್‌ ಧರಿಸಿದ್ದೆನೆಂಬ ಕಾರಣಕ್ಕೆ ನನಗೆ ಪ್ರವೇಶ ನಿರಾಕರಿಸಿದರು. ಕೊನೆಗೆ ಹೋಟೆಲ್‌ಗೆ ಹೋಗಿ ಬಟ್ಟೆ ಬದಲಿಸಿ ಚರ್ಚ್‌ ಪ್ರವೇಶ ಮಾಡಬೇಕಾಯಿತು. ನೈಟ್‌ ಡ್ರೆಸ್‌ಗಳನ್ನು ಸಾಮಾನ್ಯ ಬಟ್ಟೆ ಎಂಬಂತೆ ಧರಿಸುವ ಇಂತಹ ಮೂರ್ಖರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು ಅಷ್ಟೇ‘ ಎಂದು ಹೇಳಿದರು.

ಸದ್ಯ ಕಂಗನಾ ರನೌತ್‌ ತಮ್ಮ ಬಹುನಿರೀಕ್ಷಿತ ಚಿತ್ರ ‘ಎಮೆರ್ಜೆನ್ಸಿ‘ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT