ಸೋಮವಾರ, ಮೇ 16, 2022
22 °C

ಕುಟುಂಬದವರಿಗಾಗಿ ನಾಲ್ಕು ಕೋಟಿ ಮೊತ್ತದ ಫ್ಲ್ಯಾಟ್‌ ಖರೀದಿಸಿದ ಕಂಗನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟಿ ಕಂಗನಾ ರನೌತ್ ಒಡಹುಟ್ಟಿದವರು ಹಾಗೂ ಸೋದರಸಂಬಂಧಿಗಳಿಗಾಗಿ ಚಂಡೀಗಡದಲ್ಲಿ ನಾಲ್ಕು ಕೋಟಿ ಮೊತ್ತದ ಫ್ಲ್ಯಾಟ್‌ವೊಂದನ್ನು ಖರೀದಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾದ ಟ್ವಿಟರ್ ಹಂಚಿಕೊಂಡ ಕಂಗನಾ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಸಂಪತ್ತನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವ ಜನರನ್ನು ನಾನು ಪ್ರೋತ್ಸಾಹಿಸುತ್ತೇನೆ. ಯಾವಾಗ ನಾವು ಹಂಚಿಕೊಳ್ಳುವುದನ್ನು ಕಲಿಯುತ್ತೇವೆಯೋ ಆಗಲೇ ನಮಗೆ ನಿಜವಾದ ಸಂತೋಷದ ಅರಿವಾಗುವುದು. ನಾನು ಖರೀದಿಸಿದ ಅಪಾರ್ಟ್‌ಮೆಂಟ್‌ ಕಾಮಗಾರಿ ಹಂತದಲ್ಲಿದ್ದು 2023ಕ್ಕೆ ಮುಗಿಯಲಿದೆ. ನನ್ನ ಕುಟುಂಬಕ್ಕಾಗಿ ಇದನ್ನು ಖರೀದಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಹುಟ್ಟಿದ ಊರು ಹಿಮಾಚಲ ಪ್ರದೇಶವೇ ಆದರೂ ಆಕೆ ಕೆಲವು ವರ್ಷಗಳ ಕಾಲ ಚಂಡೀಗಡದಲ್ಲಿ ಇದ್ದರು.

ಸಿನಿಮಾಕ್ಕೆ ಸಂಬಂಧಿಸಿ ಕಂಗನಾ ಜಯಲಲಿತಾ ಜೀವನಕಥೆಯಾಧಾರಿತ ತಲೈವಿಯಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ತೇಜಸ್‌, ಧಾಕಡ್‌, ಮಣಿಕರ್ಣಿಕ ರಿರ್ಟನ್ಸ್‌ ದಿ ಲೆಜೆಂಡ್ ಆಫ್ ದಿಡ್ಡಾ ಹಾಗೂ ಇಂದಿರಾಗಾಂಧಿ ಅವರ ಮೇಲೆ ತಯಾರಾಗುತ್ತಿರುವ ಸಿನಿಮಾದಲ್ಲೂ ಆಕೆ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು