ಶುಕ್ರವಾರ, ಅಕ್ಟೋಬರ್ 23, 2020
28 °C

‘ಖಿನ್ನತೆಯ ಅಂಗಡಿ ಇಟ್ಟವರು’ ಎನ್ನುವ ಮೂಲಕ ದೀಪಿಕಾ ಬಗ್ಗೆ ವ್ಯಂಗ್ಯವಾಡಿದ ಕಂಗನಾ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವಿಶ್ವ ಮಾನಸಿಕ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ನಟಿ ಕಂಗನಾ ರನೌತ್‌ ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರ ಕಾಲೆಳೆಯುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಮಾನಸಿಕ ಆರೋಗ್ಯ ಜಾಗೃತಿಗಾಗಿ ನಾವು ಮಾಡಿದ ಚಿತ್ರವನ್ನು 'ಖಿನ್ನತೆಯ ಅಂಗಡಿ ನಡೆಸುವವರು' ನ್ಯಾಯಾಲಯಕ್ಕೆ ಎಳೆದೊಯ್ದರು ಎಂದು ತಿಳಿಸಿದ್ದಾರೆ. ತಾವು ನಟಿಸಿರುವ ಜಡ್ಜ್‌ಮೆಂಟಲ್ ಹೈ ಕ್ಯಾ ಚಿತ್ರವನ್ನು ವೀಕ್ಷಿಸಲು ಇದೇ ವೇಳೆ ಅಭಿಮಾನಿಗಳಿಗೆ ಹೇಳಿದ್ದಾರೆ. ಈ ಮೊದಲು ಚಿತ್ರಕ್ಕೆ ಮೆಂಟಲ್‌ ಹೈ ಕ್ಯಾ ಎಂಬ ಶೀರ್ಷಿಕೆಯನ್ನು ಇಡಲಾಗಿತ್ತು. ಇದನ್ನು ಬದಲಿಸುವಂತೆ ಕೆಲವರು ಪ್ರತಿಭಟಿಸಿದ ನಂತರ ಜಡ್ಜ್‌ಮೆಂಟಲ್ ಹೈ ಕ್ಯಾ ಎಂದು ಬದಲಿಸಲಾಯಿತು.

'ಮಾನಸಿಕ ಆರೋಗ್ಯ ಜಾಗೃತಿಗಾಗಿ ನಾವು ಮಾಡಿದ ಚಿತ್ರವನ್ನು ಖಿನ್ನತೆಯ ಅಂಗಡಿ ನಡೆಸುವವರು ನ್ಯಾಯಾಲಯಕ್ಕೆ ಎಳೆದೊಯ್ದರು. ಬಿಡುಗಡೆಗೂ ಮೊದಲು ಚಿತ್ರದ ಹೆಸರನ್ನು ಬದಲಿಸಬೇಕಾಯಿತು. ಇದಕ್ಕೆ ಮಾರ್ಕೆಟಿಂಗ್ ತೊಡಕುಗಳು ಬಂದವು. ಆದರೆ ಇದು ಒಳ್ಳೆಯ ಚಿತ್ರ. ಇಂದು ಇದನ್ನು ವೀಕ್ಷಿಸಿ' ಎಂದು ತಮ್ಮ ಅಭಿಮಾನಿಗಳಿಗೆ ರನೌತ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು