ಭಾನುವಾರ, ಮಾರ್ಚ್ 29, 2020
19 °C

ಜಯಲಲಿತಾ ಜನ್ಮದಿನದಂದು ವೈರಲ್ ಆಯ್ತು ಕಂಗನಾರ ‘ತಲೈವಿ’ ಫೋಟೊ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನ ಇಂದು (ಫೆ.24). ಜಯಲಲಿತಾ ಬದುಕು ಆಧರಿಸಿದ ಬಯೊಪಿಕ್‌ನಲ್ಲಿ ಚಿಕ್ಕ ವಯಸ್ಸಿನ ‘ತಲೈವಿ’ಯಾಗಿ ಕಾಣಿಸಿಕೊಂಡಿರುವ ಕಂಗನಾ ರನೋಟ್‌ರ ಮತ್ತೊಂದು ಚಿತ್ರವನ್ನು ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರತಂಡ ಬಹಿರಂಗಗೊಳಿಸಿದೆ.

ಕಪ್ಪು–ಕೆಂಪು ಅಂಚಿನ ಬಿಳಿಸೀರೆ ಉಟ್ಟಿರುವ ಕಂಗನಾ ತಲೆಗೂದಲನ್ನು ಅಚ್ಚುಕಟ್ಟಾಗಿ ಬನ್ ಕಟ್ಟಿಕೊಂಡಿದ್ದಾರೆ. ಹಣೆಯ ಮೇಲೆ ಅಗಲ ಗುಂಡು ಬಿಂದಿಯ ಅಡಿಯಲ್ಲಿ ಕೆಂಪು ಅಡ್ಡಗೆರೆಯೂ ಇದೆ. ಕೆಳತುಟಿಯನ್ನು ಎಡಕ್ಕೆ ಓರೆಯಾಗಿಸಿ ಥೇಟ್‌ ಜಯಲಲಿತಾರಂತೆಯೇ ಮುಗುಳ್ನಗೆ ತುಳುಕಿಸಿದ್ದಾರೆ.

ಇದನ್ನೂ ಓದಿ: ಎಂಜಿಆರ್‌ ಆಗಿ ಪರಕಾಯ ಪ್ರವೇಶ ಮಾಡಿದ ಅರವಿಂದ ಸ್ವಾಮಿ

ಜೂನ್ 26ರಂದು ‘ತಲೈವಿ’ ತೆರೆಗೆ ಬರಲಿದೆ. ಸುಮಾರು 30ರ ಹರೆಯದ ಜಯಲಲಿತಾರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ, ಜಯಲಲಿತಾ ರಾಜಕೀಯ ಪ್ರವೇಶಿಸಿದ ಅವಧಿಯನ್ನು ಕಟ್ಟಿಕೊಡಲಿದ್ದಾರೆ.

ಚಿತ್ರನಟಿ, ಖ್ಯಾತ ನರ್ತಕಿಯೂ ಆಗಿದ್ದ ಜಯಲಲಿತಾರ ವೈವಿಧ್ಯಮಯ, ಬಹುಮುಖಿ ಬದುಕು ಕಟ್ಟಿಕೊಡುವ ಬಯೋಪಿಕ್ ‘ತಲೈವಿ’. ಎ.ಎಲ್‌.ವಿಜಯ್ ನಿರ್ದೇಶನದ ಈ ಚಿತ್ರವು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

‘ತಲೈವಿ’ಗಾಗಿ ತಮಿಳು ಕಲಿತ ಕಂಗನಾ, ಭರತನಾಟ್ಯಂ ತರಗತಿಗೂ ಸೇರಿಕೊಂಡಿದ್ದರು. ಜಯಲಲಿತಾರಂತೆ ಕಾಣಿಸಿಕೊಳ್ಳಲೆಂದು ಗಂಟೆಗಟ್ಟಲೆ ಮೇಕಪ್‌ ಸೆಷನ್‌ಗಳಲ್ಲಿ ಪಾಲ್ಗೊಂಡಿದ್ದರು.

ಬಾಹುಬಲಿ ಹಾಗೂ ಮಣಿಕರ್ಣಿಕಾ ಸಿನಿಮಾಗಳಿಗೆ ಕಥೆ ಬರೆದಿರುವ ವಿಜಯೇಂದರ್‌ ಪ್ರಸಾದ್‌ ಈ ಸಿನಿಮಾಕ್ಕೂ ಕಥೆ ಬರೆದಿದ್ದಾರೆ. ವಿಷ್ಣುವರ್ದನ್‌ ಇಂದೂರಿ ಮತ್ತು ಶೈಲೇಶ್‌ ಸಿಂಗ್‌ ತಲೈವಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು