ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರನಟ ರಾಜ್‌ಕುಮಾರ್‌ ಜನ್ಮದಿನ: ಅಭಿಮಾನಿಗಳ ಸಂಭ್ರಮ

Published 24 ಏಪ್ರಿಲ್ 2024, 6:20 IST
Last Updated 24 ಏಪ್ರಿಲ್ 2024, 6:20 IST
ಅಕ್ಷರ ಗಾತ್ರ

ಬೆಂಗಳೂರು: ಇಂದು(ಏ.24) ವರನಟ ಡಾ. ರಾಜ್‌ಕುಮಾರ್‌ ಅವರ 95ನೇ ಜನ್ಮದಿನ. ನಟಸಾರ್ವಭೌಮ ನಮ್ಮನ್ನು ಅಗಲಿ 18 ವರ್ಷ ಉರುಳಿದ್ದರೂ, ಅವರ ನೆನಪು ಇನ್ನೂ ಹಸಿರಾಗಿದೆ. ಚಂದನವನದ ‘ಬಂಗಾರದ ಮನುಷ್ಯ’ನನ್ನು ಜನ್ಮದಿನದ ನೆವದಲ್ಲಿ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು.  

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ರಾಜ್‌ಕುಮಾರ್‌ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದ್ದು, ಪುಣ್ಯಭೂಮಿಗೆ ನೂರಾರು ಜನರು ಭೇಟಿ ನೀಡುತ್ತಿದ್ದಾರೆ. ಸಮಾಧಿ ಮುಂದೆ ಕೇಕ್‌ಗಳನ್ನು ಇಟ್ಟು ಅಭಿಮಾನಿಗಳು ತಮ್ಮ ಪ್ರೀತಿ ತೋರುತ್ತಿದ್ದಾರೆ. ಬುಧವಾರ ಬೆಳಗ್ಗೆ ರಾಘವೇಂದ್ರ ರಾಜ್‌ಕುಮಾರ್‌ ದಂಪತಿ, ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಪುತ್ರಿ ವಂದಿತಾ ಸೇರಿದಂತೆ ಕುಟುಂಬದ ಸದಸ್ಯರು ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು. ಪುಣ್ಯಭೂಮಿಯ ಆವರಣದಲ್ಲೇ ಅಭಿಮಾನಿಗಳು ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡರು. ಅನ್ನದಾನ ಮತ್ತು ರಕ್ತದಾನದ ಕಾರ್ಯಗಳೂ ನಡೆದಿವೆ. ‘ಎಕ್ಸ್‌’ನಲ್ಲಿ ಚಿತ್ರರಂಗದ ಕಲಾವಿದರು ಮತ್ತು ರಾಜಕಾರಣಿಗಳು ವರನಟನ ನೆನಪಿನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT