ಕನ್ನಡಿಗರಿಗೆ ‘ಜೆ.ಕೆ’ ಎಂದೇ ಚಿರಪರಿಚಿತರಾಗಿರುವ ಸ್ಯಾಂಡಲ್ವುಡ್ ನಟ ಕಾರ್ತಿಕ್ ಜಯರಾಮ್ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾರ್ತಿಕ್ ಅಭಿನಯದ ‘ಓ ಪುಷ್ಪಾ ಐ ಹೇಟ್ ಟಿಯರ್ಸ್’ ಹಿಂದಿ ಚಿತ್ರ ಫೆಬ್ರುವರಿ 28ರಂದು ತೆರೆ ಕಾಣಲಿದ್ದು, ಜೆ.ಕೆ. ಹೃದಯ ಬಡಿತವನ್ನು ಹೆಚ್ಚಿಸಿದೆ.

70ರ ದಶಕದ ಬಾಲಿವುಡ್ ಸೂಪರ್ಸ್ಟಾರ್ ರಾಜೇಶ್ ಖನ್ನಾ ಅವರ ‘ಓ ಪುಷ್ಪಾ’ವಿಶಿಷ್ಟ ಡೈಲಾಗ್ ಅನ್ನು ಚಿತ್ರದ ಶೀರ್ಷಿಕೆಯನ್ನಾಗಿ ಆಯ್ಕೆ ಮಾಡಲಾಗಿದೆ. ಫ್ಯಾಮಿಲಿ ಡ್ರಾಮಾ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ದಿನಕರ್ ಕಪೂರ್ ತೆರೆಗೆ ತಂದಿದ್ದಾರೆ. ಚಿತ್ರದ ಟ್ರೇಲರ್ಈಚೆಗೆ ಬಿಡುಗಡೆಯಾಗಿತ್ತು.

ಕಾರ್ತಿಕ್ಗೆ ಮುಂಬೈ ನಂಟು ಹೊಸದಲ್ಲ. ಹಿಂದಿ ಕಿರುತೆರೆಯಲ್ಲಿ ‘ಸಿಯಾ ಕೆ ರಾಮ್’ ಧಾರಾವಾಹಿಯಲ್ಲಿ ರಾವಣನಾಗಿ ಅಭಿನಯಿಸಿದ್ದರು. ರಾವಣನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ಈ ಪಾತ್ರ ನನಗೊಂದು ಐಡೆಂಟಿಟಿ ತಂದು ಕೊಡಲಿದೆ ಎಂಬ ನಂಬಿಕೆ ಇದೆ. ಚಿತ್ರ ಬಿಡುಗಡೆಯನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ’ ಎಂದು ಅವರುಕಾರ್ತಿಕ್ಗೆಚಿತ್ರದ ಸ್ಟ್ರಿಪ್ಟ್ ತುಂಬಾ ಇಷ್ಟವಾಗಿದೆಯಂತೆ. ಕೈಯಲ್ಲಿ ಕನ್ನಡದ ಸಾಕಷ್ಟು ಚಿತ್ರಗಳಿದ್ದರೂ ‘ಮಲಿಗೈ’ ತಮಿಳು ಚಿತ್ರದ ಮೂಲಕ ಕಾಲಿವುಡ್ನಲ್ಲಿ ಒಂದು ಕಾಲಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.