ಶನಿವಾರ, ಆಗಸ್ಟ್ 13, 2022
26 °C

ಕೋಮಾದಲ್ಲಿ ಸಂಚಾರಿ ವಿಜಯ್‌, ಆರೋಗ್ಯ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್‌ ಅವರು ಕೋಮಾದಲ್ಲಿದ್ದು, ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಅಪೊಲೊ ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ. 

ವಿಜಯ್‌ ಅವರು ಆರೋಗ್ಯದ ಕುರಿತು ಭಾನುವಾರ ರಾತ್ರಿ 10 ಗಂಟೆಗೆ ಬುಲೆಟಿನ್‌ ಮುಖಾಂತರ ಮಾಹಿತಿ ನೀಡಿರುವ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಅರುಣ್‌ ಎಲ್‌. ನಾಯಕ್‌, ‘ಜೂನ್‌ 12ರ ರಾತ್ರಿ 11.45ಕ್ಕೆ ವಿಜಯ್‌ ಅವರಿಗೆ ಅಪಘಾತವಾಗಿತ್ತು. ಅವರನ್ನು ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕಕ್ಕೆ ಅವರನ್ನು ಕರೆತರುವ ವೇಳೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರ ಮಿದುಳಿನ ಸಿಟಿ ಸ್ಕ್ಯಾನ್‌ ನಡೆಸಿದ ಸಂದರ್ಭದಲ್ಲಿ, ಮಿದುಳಿಗೆ ಭಾರಿ ಪೆಟ್ಟುಬಿದ್ದಿರುವುದು ಕಂಡುಬಂದಿತ್ತು. ಜೊತೆಗೆ ಮಿದುಳಿನೊಳಗೆ ರಕ್ತಸ್ರಾವವೂ ಆಗಿತ್ತು. ರಕ್ತಸ್ರಾವವನ್ನು ತಡೆಯಲು ತಕ್ಷಣದಲ್ಲೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪ್ರಸ್ತುತ ಅವರು ನ್ಯೂರೊ ಐಸಿಯುವಿನಲ್ಲಿ, ಕೃತಕ ಆಮ್ಲಜನಕದಲ್ಲಿ ಉಸಿರಾಡುತ್ತಿದ್ದಾರೆ. ಅವರು ಕೋಮಾದಲ್ಲಿದ್ದು, ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದ್ದು, ಅತ್ಯುತ್ತಮವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ’ ಎಂದಿದ್ದಾರೆ.


ಅಪೊಲೊ ಆಸ್ಪತ್ರೆಯ ಪ್ರಕಟಣೆ

ಇದನ್ನೂ ಓದಿ.. ನಟ ಸಂಚಾರಿ ವಿಜಯ್‌ಗೆ ಅಪಘಾತ: ಸ್ಥಿತಿ ಗಂಭೀರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು