ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಟ ಚಿಕ್ಕಣ್ಣ ನಾಯಕರಾಗಿ ನಟಿಸಿದ್ದ ಚೊಚ್ಚಲ ಚಿತ್ರ ‘ಉಪಾಧ್ಯಕ್ಷ’ದ ಮೂಲಕ ತಮ್ಮ ಚಂದನವನದ ಪಯಣ ಆರಂಭಿಸಿದ್ದ ಮಲೈಕಾ ಟಿ. ವಸುಪಾಲ್ ಚಿತ್ರತಂಡ ಸೇರಿಸಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ‘ಕಲ್ಟ್’ ಎಂಬ ಪದದ ಬಳಕೆ ಇತ್ತೀಚೆಗೆ ಸಾಮಾನ್ಯವಾಗಿದೆ. ಮಾಸ್ ಸಿನಿಮಾಗಳನ್ನು ‘ಇದೊಂದು ಕಲ್ಟ್ ಸಿನಿಮಾ’ ಎಂದು ಕರೆಯಲಾಗುತ್ತಿದೆ. ಇದನ್ನೇ ಚಿತ್ರದ ಶೀರ್ಷಿಕೆ ಮಾಡಿಕೊಳ್ಳಲಾಗಿದೆ. ‘ಬನಾರಸ್’ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಈ ಚಿತ್ರದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕಿ ಸಿನಿಮಾಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ಜೆ.ಎಸ್. ವಾಲಿ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.