ಬುಧವಾರ, ಸೆಪ್ಟೆಂಬರ್ 29, 2021
20 °C

ಆರೋಗ್ಯವೇ ಭಾಗ್ಯ ಎಂದ ನಟಿ ರಮ್ಯಾ: ಇನ್‌ಸ್ಟಾಗ್ರಾಂನಲ್ಲಿ ಹೆಲ್ತ್ ಟಿಪ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಕೀಯ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ರಮ್ಯಾ ಇದೀಗ ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ.

ಆರೋಗ್ಯವೇ ಭಾಗ್ಯ ಎಂದು ಇನ್‌ಸ್ಟಾಗ್ರಾಂನಲ್ಲಿ ಹಳೆಯ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ರಮ್ಯಾ, 7 ಅಂಶಗಳ ಸಲಹೆಗಳನ್ನೊಳಗೊಂಡ ಸಂದೇಶವನ್ನೂ ನೀಡಿದ್ದಾರೆ. ಅವುಗಳು ಹೀಗಿವೆ;

‘1. ಆರೋಗ್ಯವೇ ಭಾಗ್ಯ. 2. ನಿಮ್ಮ ಚರ್ಮದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. 3. ಕೆಲಸ ಮಾಡಿ ಮತ್ತು ನೀವು ಈಗಾಗಲೇ ಹೊಂದಿರುವುದನ್ನು ಇನ್ನಷ್ಟು ಉತ್ತಮಗೊಳಿಸಿ. 4. ಮಹಿಳೆಯರು ಕಬ್ಬಿಣದ ಅಂಶವಿರುವ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಬೇಕು. 5. ನೀವು ಏನನ್ನೇ ಹೊಂದಿದ್ದರೂ ಅದನ್ನು ಆನಂದಿಸಲು ಆರೋಗ್ಯ ಇಲ್ಲದ ಮೇಲೆ ಪ್ರಯೋಜನವೇನು?. 6. ಇತರರ ಜತೆ ನಿಮ್ಮನ್ನು ಹೋಲಿಸಿಕೊಳ್ಳುವುದನ್ನು ಬಿಟ್ಟುಬಿಡಿ. 7. ನಗುತ್ತಾ ಇರಿ. ಏನೇ ಆರೋಗ್ಯ ಸಲಹೆಗಳಿದ್ದರೆ ಪ್ರತಿಕ್ರಿಯಿಸಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಸುಮಾರು 66 ಸಾವಿರಕ್ಕೂ ಹೆಚ್ಚು ಮಂದಿ ರಮ್ಯಾ ಸಂದೇಶವನ್ನು ವೀಕ್ಷಿಸಿದ್ದು, ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು