ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರುದ್ಧ ಹೊಸ ಅವತಾರ!

Published 11 ಆಗಸ್ಟ್ 2023, 0:47 IST
Last Updated 11 ಆಗಸ್ಟ್ 2023, 0:47 IST
ಅಕ್ಷರ ಗಾತ್ರ

ಸಿಲ್ವರ್‌ಸ್ಕ್ರೀನ್‌ನಿಂದ ಕೊಂಚ ದೂರ ಉಳಿದಿದ್ದ ನಟ ಅನಿರುದ್ಧ ಮತ್ತೆ ಬೆಳ್ಳಿಪರದೆಯಲ್ಲಿ ಅದೃಷ್ಟಪರೀಕ್ಷೆಗೆ ಸಜ್ಜಾಗಿದ್ದಾರೆ. ಇದೀಗ ಶೆಫ್‌ ವೇಷದಲ್ಲಿ ಅನಿರುದ್ಧ ಡಾರ್ಕ್‌ ಕಾಮಿಡಿ ಜಾನರ್‌ನ ‘ಶೆಫ್‌ ಚಿಂದಬರ’ನಾಗಿ ಮರಳಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗಷ್ಟೇ ನಟ ಕಿಚ್ಚ ಸುದೀಪ್‌ ರಿವೀಲ್‌ ಮಾಡಿದ್ದಾರೆ.    

ಚಿತ್ರದ ಮುಹೂರ್ತ ಗುರುವಾರ(ಆ.10) ನಡೆದಿದ್ದು, ಚಿತ್ರೀಕರಣವೂ ಆರಂಭವಾಗಿದೆ. ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲು ನಿರ್ದೇಶಕ ಎಂ.ಆನಂದರಾಜ್‌ ನಿರ್ಧರಿಸಿದ್ದು, ಸೆ.15ಕ್ಕೆ ಶೂಟಿಂಗ್‌ ಪೂರ್ಣಗೊಳಿಸುವ ಗಡುವು ಹಾಕಿಕೊಂಡಿದ್ದಾರೆ. ಬೆಂಗಳೂರು, ದಾಬಸ್‌ಪೇಟೆ, ತುಮಕೂರು, ಮಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. 

‘ಇಡೀ ಸಿನಿಮಾದ ಕಥೆಯನ್ನು ನಾನು ಕ್ಯಾರೆಕ್ಟರ್‌ ಪೋಸ್ಟರ್‌ನಲ್ಲಿ ಹೇಳಿದ್ದೇನೆ. ನಾಯಕನ ವೃತ್ತಿ ಮತ್ತು ಮತ್ತೊಂದು ಮುಖ ಅದರಲ್ಲಿ ಅನಾವರಣಗೊಂಡಿದೆ. ಕಥೆಯಲ್ಲಿ ಹಲವು ತಿರುವುಗಳಿದ್ದು, ಅನನುಕ್ರಮಣಿಕೆಯ ಸ್ಕ್ರೀನ್‌ಪ್ಲೇ ಹೊಂದಿದೆ. ಇದಕ್ಕಾಗಿಯೇ ‘ಟೇಸ್ಟಿ ಟ್ವಿಸ್ಟ್‌’ ಎಂಬ ಟ್ಯಾಗ್‌ಲೈನ್‌ ಅನ್ನು ಸಿನಿಮಾಗೆ ನೀಡಿದ್ದೇನೆ. ಇದು ಎಂಟರ್‌ಟೇನ್ಮೆಂಟ್‌ ಪ್ಯಾಕೇಜ್‌’ ಎನ್ನುತ್ತಾರೆ ಆನಂದರಾಜ್. 

‘ಅನಿರುದ್ಧ ಅವರನ್ನು ‘ರಾಘು’ ಸಿನಿಮಾ ಬಳಿಕ ಭೇಟಿಯಾಗಿ ಒನ್‌ ಲೈನ್‌ ಕಥೆ ಹೇಳಿದ್ದೆ. ಅವರು ಒಪ್ಪಿಗೆ ಸೂಚಿಸಿದ ಬಳಿಕ ಇಡೀ ಚಿತ್ರಕಥೆ ಸಿದ್ಧವಾಗಿದೆ. ಅವರು ಕಿರುತೆರೆಯಲ್ಲೇ ತೊಡಗಿಸಿಕೊಂಡಿದ್ದರೂ, ಸಿನಿಮಾಗಾಗಿ ಅವರಾಗಿಯೇ ಸಿದ್ಧರಾಗಿದ್ದಾರೆ. ಸಾಕಷ್ಟು ಹೋಂವರ್ಕ್‌ ಮಾಡಿಕೊಂಡಿದ್ದಾರೆ’ ಎಂದರು ಆನಂದರಾಜ್‌. 

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಉದಯಲೀಲ ಛಾಯಾಚಿತ್ರಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅನಿರುದ್ಧ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ‘ಲವ್ ಮಾಕ್ಟೇಲ್–2’ ಖ್ಯಾತಿಯ ರೇಚಲ್ ಡೇವಿಡ್‌ ಅಭಿನಯಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT