ಸೋಮವಾರ, ಮಾರ್ಚ್ 30, 2020
19 °C

‘ಗೋರಿ‘ಯ ಜವಾರಿ ಹಾಡು: ಹುಡುಗಿ ನೋಡಿ ನಕ್ಕರೇ ‘ಬ್ಯಾರೆನೆ ಐತಿ ಅದು ಬ್ಯಾರೆನೆ ಐತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೋರಿ ಸಿನಿಮಾದ  ‘ಬ್ಯಾರೆನೆ ಐತಿ, ಅದು ಬ್ಯಾರೆನೆ ಐತಿ’ ಜವಾರಿ ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. 

ಕಳೆದ 4 ದಿನಗಳ ಹಿಂದೆ ಬಿಡುಗಡೆಯಾದ ಈ ಜವಾರಿ ಹಾಡಿಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ‘ಬ್ಯಾರೆನೆ ಐತಿ, ಅದು ಬ್ಯಾರೆನೆ ಐತಿ’ ಹಾಡನ್ನು ಶಿವು ಬೇರ್ಗಿ ಬರೆದಿದ್ದು ವಿನು ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಾಸ್ಯ ನಟ ಶರಣ್‌ ಅಭಿನಯದ ರ‍್ಯಾಂಬೊ2 ಚಿತ್ರದಲ್ಲಿ 'ಚುಟು ಚುಟು' ಎಂಬ ಜವಾರಿ ಹಾಡು ಕೂಡ ಸಾಕಷ್ಟು ಸದ್ದು ಮಾಡಿತ್ತು. ಈಗ ಗೋರಿ ಸಿನಿಮಾದಲ್ಲೂ ಒಂದು ಜವಾರಿ ಹಾಡನ್ನು ಸೇರಿಸಲಾಗಿದೆ.

ಹುಡಗಿಯೊಬ್ಬಳು ಹುಡುಗನನ್ನು ನೋಡಿ ನಕ್ಕರೆ ಅಥವಾ ಹುಬ್ಬು ಹಾರಿಸಿದರೆ ಅದು ಬ್ಯಾರೆನೆ ಐತಿ ಎಂದು ಹಾಡಿನ ಉದ್ದಕ್ಕೂ ಹೇಳಲಾಗಿದೆ. ಕಾಲೇಜು ದಿನಗಳಲ್ಲಿನ ಯುವಕ ಯುವತಿಯರ ಪ್ರೇಮ ನಿವೇದನೆಯನ್ನು ಈ ಹಾಡು ನೆನಪಿಸುತ್ತದೆ. 

ಇದೇ ಹಾಡಿನ ಲಿರೀಕಲ್‌ ಸಾಂಗ್‌ ಕೂಡ ಈ ಹಿಂದೆ  ಬಿಡುಗಡೆಯಾಗಿತ್ತು. ಅದಕ್ಕೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು

ಜಾತಿ– ಧರ್ಮಕ್ಕಿಂತ ಪ್ರೀತಿ ಮಿಗಿಲಾದುದು, ಪ್ರೀತಿಗಿಂತ ಮಾನವೀಯತೆ ಮಿಗಿಲಾದುದು ಎಂಬ ಸಂದೇಶ ನೀಡಲು ಈ ಸಿನಿಮಾ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿದೆ. 

 ನಾಯಕ ಕಿರಣ್‌ಗೆ ಸ್ಮಿತಾ ಜೊತೆಯಾಗಿದ್ದಾರೆ. ಈ ಸಿನಿಮಾವನ್ನು ಗೋಪಾಲಕೃಷ್ಣ ನಿರ್ದೇಶನ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು