ಇಲ್ಲಿ ಮಾಡಿದ ತಪ್ಪಿಗೆ ಇಲ್ಲೇ ಶಿಕ್ಷೆ ಅನುಭವಿಸಬೇಕು. ಹಾಗಂತ ಹೇಳಲು ಹೊರಟಿದ್ದಾರೆ ಪ್ರಿಯಾಂಕಾ ಉಪೇಂದ್ರ. ‘ಕರ್ತ, ಕರ್ಮ, ಕ್ರಿಯಾ’ ಮೂಲಕ ಈ ಸಂದೇಶ ಇದೆಯಂತೆ.

ಕ್ರೈಂ, ಥ್ರಿಲ್ಲರ್ ಕಥಾ ಹಂದರದ ಚಿತ್ರವಿದು. ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ. ಜುಲೈ ಮೊದಲವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ವೇದಾಂತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೇದಾಂತ್ ಗೌಡ ಹಾಗೂ ಶಿವ ರೆಡ್ಡಿ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ರಾಜಕಿರಣ್ ಜೆ. ಈ ಚಿತ್ರದ ನಿರ್ದೇಶಕರು. ಪ್ರಿಯಾಂಕಾ ಉಪೇಂದ್ರ ನಟನೆಯ ‘1980’ ಚಿತ್ರವನ್ನು ನಿರ್ದೇಶಿಸಿದ್ದ ರಾಜಕಿರಣ್ ಅವರಿಗೆ ಇದು ಎರಡನೇ ಚಿತ್ರ.

ಪ್ರಿಯಾಂಕಾ ಉಪೇಂದ್ರ ‘ಕರ್ತ ಕರ್ಮ ಕ್ರಿಯ’ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಜಯನಗರದ ಶ್ರೀವಿನಾಯಕ ದೇವಾಲಯದಲ್ಲಿ ನಡೆಯಿತು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.

ಜೀವ ಆ್ಯಂಟೊನಿ ಛಾಯಾಗ್ರಹಣ, ಆನಂದರಾಜ್ ವಿಕ್ರಮ್ ಸಂಗೀತ ನಿರ್ದೇಶನ, ಲೋಕೇಶ್ ಪುಟ್ಟೇಗೌಡ ಸಂಕಲನ ಹಾಗೂ ಪುಷ್ಪರಾಜ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಎಸ್. ನರೇಂದ್ರಬಾಬು ಸಂಭಾಷಣೆ ಬರೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.