ಶಿವಾಜಿ ಮಹಾರಾಜರನ್ನು ಆರಾಧಿಸುವ ಉತ್ತರ ಕರ್ನಾಟಕದ ಕುಟುಂಬವೊಂದರ ಕಥೆಯಾಧಾರಿತ ‘ಇನಾಮ್ದಾರ್’ ಚಿತ್ರ ಇಂದು (ಅ.27) ತೆರೆ ಕಾಣುತ್ತಿದೆ. ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ ಚಿತ್ರವನ್ನು ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿದ್ದಾರೆ. ‘ಇನಾಮ್ದಾರ್’ ಕುಟುಂಬ ಹಾಗೂ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಶಿವನ ಆರಾಧಕ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆಯನ್ನು ಒಳಗೊಂಡಿದೆ. ಬೆಳಗಾವಿ, ಕುಂದಾಪುರ, ಚಾಮರಾಜನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಾಯಕ ರಂಜನ್ ಛತ್ರಪತಿಗೆ ಚಿರಶ್ರೀ ಅಂಚನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಎಂ.ಕೆ.ಮಠ, ರಘು ಪಾಂಡೇಶ್ವರ ಮೊದಲಾದವರಿದ್ದಾರೆ. ರಾಕಿ ಸೋನು ಹಾಗೂ ನಕುಲ್ ಅಭಯಂಕರ್ ಸಂಗೀತ ಚಿತ್ರಕ್ಕಿದೆ.

ರೋನಿ: ಧರ್ಮಕೀರ್ತಿರಾಜ್, ತಿಲಕ್ ಅಭಿನಯದ ‘ರೋನಿ’ ಚಿತ್ರ ಕೂಡ ಇಂದೇ ತೆರೆ ಕಾಣುತ್ತಿದೆ. ಕಿರಣ್.ಆರ್.ಕೆ ಕಥೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಎಂ.ರಮೇಶ್ ಹಾಗೂ ಪವನ್ಕುಮಾರ್ ಬಂಡವಾಳ ಹೂಡಿದ್ದಾರೆ. ಮುಂಬೈ ಮೂಲದ ರುತ್ವಿ ಪಟೇಲ್ ನಾಯಕಿ. ತಾರಾಗಣದಲ್ಲಿ ಕೀರ್ತಿರಾಜ್, ರಘು ಪಾಂಡೇಶ್ವರ, ಬಲರಾಜವಾಡಿ ಮುಂತಾದವರಿದ್ದಾರೆ. ಆಕಾಶ್ಪರ್ವ ಸಂಗೀತ ಸಂಯೋಜನೆ, ವೀನಸ್ನಾಗರಾಜಮೂರ್ತಿ ಛಾಯಾಗ್ರಹಣ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.