ಮುಕ್ತಾಯದತ್ತ ‘ರೆಮೋ’ ಚಿತ್ರೀಕರಣ

ಪವನ್ ಒಡೆಯರ್ ನಿರ್ದೇಶನದಲ್ಲಿ ನಿರ್ಮಾಪಕ ಸಿ.ಆರ್. ಮನೋಹರ್ ನಿರ್ಮಾಣದ ಅದ್ದೂರಿ ವೆಚ್ಚದ ಚಿತ್ರ ‘ರೆಮೋ’ ಚಿತ್ರೀಕರಣ ಬಹುತೇಕ ಕ್ಲೈಮಾಕ್ಸ್ ತಲುಪಿದೆ. ಹಾಡುಗಳ ಚಿತ್ರೀಕರಣ ಬಾಕಿಯಿದೆ.
ಚಿತ್ರದ ನಾಯಕನ ಪ್ರವೇಶದ ಹಾಡನ್ನು ಅದ್ದೂರಿ ಸೆಟ್ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಬೆಂಗಳೂರಿನ ಕೆಂಗೇರಿ ಉಲ್ಲಾಳು ಬಳಿಯ ಸನ್ ಸೆಟ್ ಪಾಯಿಂಟ್ನ ಬೃಹತ್ ಮೈದಾನದಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್ ಹಾಕಲು ಚಿತ್ರ ತಂಡ ಮುಂದಾಗಿದೆ. ಕಲಾ ನಿರ್ದೇಶಕ ಗುಣಶೇಖರನ್ ಸೆಟ್ ನಿರ್ಮಾಣದ ನೇತೃತ್ವ ವಹಿಸಿಕೊಂಡಿದ್ದಾರೆ.
ಅದ್ದೂರಿ ಸೆಟ್ನಲ್ಲಿ 20ಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಿ ಶೂಟಿಂಗ್ ನಡೆಸಲಾಗುವುದು. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಇದೆ. ವೈದಿ ಅವರ ಕ್ಯಾಮೆರಾ ಕೈಚಳಕ ಇದೆ. ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ಸಂಯೋಜನೆ ಇದೆ. ನಾಯಕ ನಟ ಇಶಾನ್ ಹಾಗೂ ನಾಯಕಿ ಆಶಿಕಾ ಅವರ ನೃತ್ಯ ಭರ್ಜರಿಯಾಗಿದೆ ಎಂದು ಚಿತ್ರ ತಂಡ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.