ಭಾನುವಾರ, ಮಾರ್ಚ್ 29, 2020
19 °C

ಸಂಗೀತ ನಿರ್ದೇಶಕ ವಿ.ಮನೋಹರ್‌ ಪ್ರೇಮ ನಿವೇದನೆ ಮಾಡಿದ್ದು ಹೇಗೆ?: ವಿಡಿಯೊ ನೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಮ್ಮ ಪ್ರೇಮನಿವೇದನೆ ಆಗಿದ್ದು ಫೋನ್‌ನಲ್ಲಿ. ಮೊದಲು ಪ್ರಪೋಸ್‌ ಮಾಡಿದ್ದು ನಾನೇ..’ ಹೀಗೆಂದು ನಗುತ್ತಾ  ಪತ್ನಿಯ ಕಡೆಗೆ ನೋಡಿದರು ಸಂಗೀತ ನಿರ್ದೇಶಕ ವಿ.ಮನೋಹರ್‌.

ಸಿನಿಮಾ ಸಂಗೀತ ಕ್ಷೇತ್ರದಲ್ಲೇ ಮುಳುಗಿಹೋಗಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್‌, ವೇಣಿಯವರನ್ನು ಮದುವೆ ಆಗಲು ಕಾರಣವೇನು? ಪ್ರಪೋಸ್‌ ಮಾಡಿದ್ದು ಹೇಗೆ? ಇಲ್ಲಿದೆ ನೋಡಿ:

ಇದನ್ನೂ ಓದಿ: ಪ್ರಜಾವಾಣಿ 'ವ್ಯಾಲೆಂಟೈನ್ಸ್ ಡೇ' ಲೇಖನ ಸ್ಫರ್ಧೆ ಫಲಿತಾಂಶ

140ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿ, ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿ, ನೂರಾರು ಜನಪ್ರಿಯ ಹಾಡುಗಳನ್ನು ಬರೆದಿರುವ ಮನೋಹರ್‌ ಪತ್ನಿ ವೇಣಿ ಜೊತೆಗೆ ‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದು ಸ್ಪರ್ಧೆಯೊಂದರ ತೀರ್ಪುಗಾರರಾಗಿ. ಪ್ರಜಾವಾಣಿ ಆನ್‌ಲೈನ್‌ ಪತ್ರಿಕೆಯು, ‘ಪ್ರೇಮಿಗಳ ದಿನಾಚರಣೆ’ಯ ಸಂದರ್ಭಕ್ಕೆ ಏರ್ಪಡಿಸಿದ್ದ ‘ನನ್ನ ಮೊದಲ ಪ್ರೇಮನಿವೇದನೆ’ ಸ್ಪರ್ಧೆಗೆ ನೂರಾರು ಪತ್ರಗಳು ಬಂದಿದ್ದವು. ಅವುಗಳಲ್ಲಿ ಅತ್ಯುತ್ತಮ ಮೂರು ಪ್ರೇಮನಿವೇದನೆಗಳನ್ನು ಮನೋಹರ್‌– ವೇಣಿ ದಂಪತಿ ಆಯ್ಕೆ ಮಾಡಬೇಕಿತ್ತು. ಅದೇ ಸಂದರ್ಭದಲ್ಲಿ ಈ ದಂಪತಿಯ ವಿಶೇಷ ಸಂದರ್ಶನವೂ ನಡೆಯಿತು. ಸಂದರ್ಶನದಲ್ಲಿ ಈ ದಂಪತಿಯ ಪ್ರೇಮಪ್ರಕರಣದ ಗುಟ್ಟೂ ಹೊರಗೆ ಬಂತು!

‘ನನ್ನ ಮೊದಲ ಪ್ರೇಮನಿವೇದನೆ’ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲ 14 ಲೇಖನಗಳನ್ನು ಪ್ರಜಾವಾಣಿ ಯುವ ವಿಭಾಗದಲ್ಲಿ ಪ್ರಕಟಿಸಲಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು