ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಕ್‌ ರೂಪದಲ್ಲಿ ಕನ್ನಡದಲ್ಲೊಂದು ವೆಬ್‌ ಸರಣಿ 

Last Updated 1 ಆಗಸ್ಟ್ 2020, 7:43 IST
ಅಕ್ಷರ ಗಾತ್ರ

ಕೊರೊನಾ ಕಾರಣ ಒಟಿಟಿಯಲ್ಲಿ ಮನರಂಜನಾ ಕಾರ್ಯಕ್ರಮ ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಸಿನಿಮಾ, ವೆಬ್‌ ಸರಣಿ ಹಾಗೂ ಕಿರುಚಿತ್ರಗಳನ್ನು ನಿರ್ಮಿಸುವವರು ಅವುಗಳ ಬಿಡುಗಡೆಗೆ ಒಟಿಟಿಯನ್ನು ಪರ್ಯಾಯ ಮಾರ್ಗವಾಗಿ ಕಂಡುಕೊಂಡಿದ್ದಾರೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಕನ್ನಡದಲ್ಲೂ ಹೊಸಬರ ತಂಡಗಳು ದಾಂಗುಡಿ ಇಡುತ್ತಿವೆ.

‘ಬಿಂದು’ ಶೀರ್ಷಿಕೆಯ ವೆಬ್‌ ಸರಣಿಯನ್ನು ಹೊಸಬರ ತಂಡ ನಿರ್ಮಿಸುತ್ತಿದೆ. ಇದು ಕಾಮಿಕ್‌ ರೂಪದಲ್ಲಿ ಇರಲಿದೆಯಂತೆ. ‘ನಾಟ್ ಎ ಬ್ಲಾಕ್ ಮಾರ್ಕ್’ ಎನ್ನುವ ಅಡಿಬರಹ ಕೊಡಲಾಗಿದೆ. ಚಲಿಸುವ ದೃಶ್ಯಗಳಿಗಿಂತ ಭಾವಚಿತ್ರಗಳ ಮೂಲಕ ಸನ್ನಿವೇಶಗಳನ್ನು ತೋರಿಸಲಾಗುತ್ತದೆ. ಹಿನ್ನೆಲೆ ಧ್ವನಿಯಲ್ಲಿ ಕಥಾಹಂದರ ನಿರೂಪಿಸಲಾಗುತ್ತದೆ. ಇಂತಹ ಪ್ರಯತ್ನ ಹೊಸತು ಎನ್ನುತ್ತಾರೆ ಈ ವೆಬ್‌ ಸರಣಿಯ ನಿರ್ದೇಶಕಬಸವರಾಜ್‍ ಅಯಟ್ಟಿ.

‘ಇದು ಮಹಿಳಾ ಪ್ರಧಾನ ಕಥೆಯ ಸರಣಿ. ಸಂಪ್ರದಾಯಸ್ಥ ಕುಟುಂಬದಹುಡುಗಿಯೊಬ್ಬಳ ಬದುಕಿನಲ್ಲಿ ಒಂದು ಘೋರ ಘಟನೆ ನಡೆದಾಗ ಸಮಾಜವು ಆಕೆಯನ್ನು ಯಾವ ರೀತಿ ನೋಡುತ್ತದೆ ಎಂಬುದನ್ನು ಈ ಸರಣಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಅಸಹಾಯಕ ಹೆಣ್ಣುಮಗಳನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ, ಅದು ಸರೀನಾ ಅಥವಾ ತಪ್ಪಾ? ಎನ್ನುವ ವಿಶ್ಲೇಷಣೆಯನ್ನು ಜನರಿಗೆ ಬಿಡುವಂತಹ ಸಂದೇಶ ಇದರಲ್ಲಿದೆ’ ಎಂದು ಮಾತು ವಿಸ್ತರಿಸಿದರು.

ಬಸವರಾಜ್‍ ಅಯಟ್ಟಿ ನಿರ್ದೇಶನದರಚನೆ, ಚಿತ್ರಕಥೆ, ಸಂಭಾಷಣೆ ನಿಭಾಯಿಸಿದ್ದಾರೆ. ಅಲ್ಲದೆ ನಾಯಕನಾಗಿ ನಟಿಸಿದ್ದು, ಕಥೆಗೆ ತಿರುವು ಕೊಡುವ ಪಾತ್ರವಂತೆ. ಮತ್ತೊಬ್ಬ ನಾಯಕನ ಪಾತ್ರದಲ್ಲಿ ಪ್ರಶಾಂತ್‌ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ. ಇಬ್ಬರೂ ನಾಯಕರು ಒಬ್ಬಳನ್ನೇ ಪ್ರೀತಿಸುತ್ತಿರುತ್ತಾರೆ. ಹಾಗಾಗಿಯೇ ಬಿಂದು ಎನ್ನುವ ಶೀರ್ಷಿಕೆ ಕೊಡಲಾಗಿದೆ’ ಎನ್ನುವ ಮಾತು ಸೇರಿಸಿದರು.

‘ರಾಜ.ಡಿ ಮತ್ತು ಶಾಲಿನಿ.ಆರ್ ಜಂಟಿಯಾಗಿ ಈ ವೆಬ್‌ ಸರಣಿ ನಿರ್ಮಿಸುತ್ತಿದ್ದಾರೆ.ಇವರದೇ ಸಂಸ್ಥೆ ‘ಸಿಲ್ವರ್ ಷೋ’ ಯೂಟ್ಯೂಬ್ ಚಾನೆಲ್ ಮೂಲಕ ಒಂಬತ್ತು ಕಂತುಗಳು ಪ್ರಸಾರವಾಗಲಿವೆ.ಸದ್ಯದಲ್ಲೆ ಚಿತ್ರೀಕರಣ ಆರಂಭಿಸಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಪ್ರೇಕ್ಷಕರ ಎದುರು ಬರುವ ಯೋಜನೆ ಇದೆ’ ಎಂದರು.

ಸುರೇಶ್‍ಮಾಶಿ, ಮಂಜು ಮಹದೇವ್,ಬಸವರಾಜ್‍ ಅಯಟ್ಟಿ ಬರೆದಿರುವ ಐದು ಹಾಡುಗಳಿಗೆ ಮಂಜು ಮಹದೇವ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುರೇಶ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT